Ad imageAd image

ಟಿಮ್ ಡೆವಿಡ್ ಸ್ಪೋಟಕ  ಬ್ಯಾಟಿಂಗ್: ಕಾಂಗರೂಗಳಿಗೆ ಜಯದ ಮಾಲೆ

Bharath Vaibhav
ಟಿಮ್ ಡೆವಿಡ್ ಸ್ಪೋಟಕ  ಬ್ಯಾಟಿಂಗ್: ಕಾಂಗರೂಗಳಿಗೆ ಜಯದ ಮಾಲೆ
WhatsApp Group Join Now
Telegram Group Join Now

ಬಸೆಟ್ರೆ ಸೆಂಟ್ ಕಿಂಟ್ಸ್ ( ವೆಸ್ಟ್ ಇಂಡೀಸ್) ಟಿಮ್ ಡೆವಿಡ್ ಅವರ ದಾಖಲೆಯ ಬ್ಯಾಟಿಂಗ್ ( 37 ಎಸೆತಗಳಲ್ಲಿ 102) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಸುಲಭವಾಗಿ ಗೆದ್ದಿತು.

ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ಗೆ 214 ರನ್ ಗಳಿಸಿತು. ತಂಡದ ಪರವಾಗಿ ಸಾಯಿ ಹೋಪ್ಸ್ ಕೂಡ ಇಂದು ಶತಕ ಬಾರಿಸಿದರು. ಅವರು 57 ಎಸೆತಗಳಲ್ಲಿ 8 ಬೌಂಡರಿ, 6  ಸೆಕ್ಸರ್ ನೆರವಿನಿಂದ 102 ರನ್ ಗಳನ್ನು ಗಳಿಸಿದರು. ಬ್ರೆಂಡನ್ ಕಿಂಗ್ 36 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು.

ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 5.5 ಓವರುಗಳಲ್ಲಿ 3 ವಿಕೆಟ್ ಗೆ  61 ರನ್ ಗಳಿಸಿ ಸಂಕಷ್ಟದಲ್ಲಿರುವಾಗ  ಟಿಮ್ ಡೆವಿಡ್ ತಂಡದ ನೆರವಿಗೆ ಬಂದರು. ಅವರು 6 ಬೌಂಡರಿ, 11 ಸಿಕ್ಸರ್ ಬಾರಿಸಿ ವೇಗದ ಶತಕ ಸಿಡಿಸಿದರಲ್ಲದೇ ತಂಡಕ್ಕೆ ಅಭೂತಪೂರ್ವ ಜಯ ತಂದುಕೊಟ್ಟರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!