ಹುಕ್ಕೇರಿ: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಮ್ಮ ಆರ್. ಸಿ. ಬಿ. ಮತ್ತು ಪಂಜಾಬ್ ತಂಡದ ನಡುವಿನ 2025ರ, ಐ. ಪಿ. ಎಲ್. ಅಂತಿಮ ಪಂದ್ಯಕ್ಕೆ ತೆರೆ ಬಿದ್ದಿದೆ, ಬರೋಬ್ಬರಿ 18 ವರ್ಷಗಳ ಸುದೀರ್ಘ ಪಯಣದಲ್ಲಿ ನಮ್ಮ ಬೆಂಗಳೂರು ತಂಡ ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಭದ್ರವಾಗಿ ಅಚ್ಚೋತಿಸಿ ಅಮೋಘ ಹೆಗ್ಗಳಿಕೆ ಸಂಪಾದಿಸಿದ ತಂಡ, ಆದರೆ ಟ್ರೋಫಿಗೆ ಮುತ್ತಿಕ್ಕಿ ಚಾಂಪಿಯನ್ ಪಟ್ಟಕೇರಲು ವಿಫಲವಾಗಿತ್ತು.
ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು,ಐಪಿಎಲ್ ಆರಂಭದಿಂದ ಇಲ್ಲಿಯತನಕ ಬೇರೆ ಯಾವ ತಂಡದ ಆಮಿಷಕ್ಕೆ ಒಳಗಾಗದೇ 18 ವರ್ಷದಿಂದ ನಮ್ಮ RCB ತಂಡಕ್ಕೆ ನಿಸ್ವಾರ್ಥಮಯ ಆಟ ಆಡಿದ ಕೀರ್ತಿ ನಮ್ಮ ಕಿಂಗ್ ವಿರಾಟ್ ಕೊಹ್ಲಿ ಅವರದ್ದು, ಇದು ನಮ್ಮ RCB ಸಮಯ, ಬಡ್ಡಿ ಸಮೇತ 18 ವರ್ಷದ ಅಜ್ಞಾತವಾಸಕ್ಕೆ ಮುಕ್ತಿ ಕೊಟ್ಟ ಸಮಯ, 18 ವರ್ಷದಿಂದ ಟ್ರೋಫಿ ಇಲ್ಲದೇ ನಿಸ್ವಾರ್ಥ ಆಟ ಆಡಿರುವ ವಿರಾಟ್ ಅವರಿಗೆ ಕೈಗೆ ಟ್ರೋಫಿ ಕೊಟ್ಟು ಮೆರೆಸಿದ ಸಮಯ, 18 ವರ್ಷದಿಂದ ಪದೇ ಪದೇ ನೋವಿನ ಆರ್ತನಾದ ಸದ್ದಿನಲ್ಲಿರೋ ಅಸಂಖ್ಯಾತ ಅಭಿಮಾನಿ ಪಡೆಯ ಅಭಿಮಾನದ ಪ್ರಾರ್ಥನೆಗೆ ಗೆಲುವಿನ ತಿಲಕವಿಟ್ಟು,ಗೆಲುವಿನ ಗೆಜ್ಜೆಯ ನಾದದ ಸಪ್ಪಳ ಕೇಳಿಸಿದ ಸಮಯ, ಯಾವುದೇ ತಂಡಕ್ಕೆ ಇರದಿರೋ ನಿಷ್ಠಾವಂತ ಅಭಿಮಾನಿಗಳು ಗೆಲುವಿನ ಕೇಕೆ ಹಾಕಿದ ಸಮಯ,18 ವರ್ಷದಿಂದ ಟ್ರೋಫಿ ಇಲ್ಲದೇ ಮಮ್ಮಲ ಮರುಗುತ್ತಿರುವ ನಮ್ಮ ತಂಡದ ಹೆಸರನ್ನು ಟ್ರೋಫಿಗೆ ಅಂಟಿಸಿದ ಸಮಯ, ಈ ಆವೃತ್ತಿಯ ನಂಬರ್ : 18 ಇವತ್ತಿನ ದಿನಾಂಕ 3+ 06+ 2+0+2+5 = 18 ,ವಿರಾಟ್ ಜೆರ್ಸಿ ನಂಬರ್ = 18, ಇದು ಕಾಕತಾಳಿಯವೋ, ಇಲ್ಲ ಟ್ರೋಫಿ ಎತ್ತಲು ಸನ್ನಿಹಿತವಾದ ಕಾಲವಾಗಿತ್ತೋ ಗೊತ್ತಿಲ್ಲ? ಅದೇನೇ ಇರಲಿ ಇಂದಿನ 18 ರ ಗಂಟು, ನಮ್ಮ ತಂಡಕ್ಕೆ ಬೆಸೆಯಿತು ಗೆಲುವಿನ ಗಂಟು, ಇವತ್ತಿನ ಕ್ಷಣವಾಯಿತು ಮರೆಯಲಾಗದ ಅವಿನಾಭಾವಾದ ನಂಟು ಗೆದ್ದು ಬಂತು RCB, 18 ವರ್ಷದ ಅಭಿಮಾನದ ಪ್ರಾರ್ಥನೆಗೆ ಗೆಲುವಿನ ತಿಲಕವಿಟ್ಟಿತು.
ಈಗ ಗೆಲುವಿನ ಶಿಖರವ ಏರಿತು, ನವ ಜಯಭೇರಿ, ನಮಗಿದೆ ಮೊಳಗಿತು ಎಂದು ರಾಷ್ಟ್ರೀಯ ಸಮಾಜ ಸೇವ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಹುಕ್ಕೇರಿ ಮಂಡಲ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸಂಗಮೇಶ ದುರದುಂಡಿ ಸಂತಸ ವ್ಯಕ್ತಪಡಿಸಿದರು.
ವರದಿ: ರಾಜು ಮುಂಡೆ




