ಬೆಳಗಾವಿ : ಮೈಕ್ರೋ ಫೈನಾನ್ಸ್ ಹಾವಳಿಗೆ ಮೂಗುದಾರ ಹಾಕಲು ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿರುವಾಗಲೇ ಬೆಳಗಾವಿಯಲ್ಲಿ ಮತ್ತೊಬ್ಬ ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ.
ಬೆಳಗಾವಿಯ ಬೈಲಹೊಂಗಲದ ನಿವಾಸಿ ರಫೀಕ್ ತಿಗಡಿ ಎಂಬಾತ ಹತ್ಯೆ ಮಾಡಿಕೊಂಡವರುರಫೀಕ್ ಸ್ಥಳೀಯ ಮೈಕ್ರೋ ಫೈನಾನ್ಸ್ ಕಂಪನಿಯಿಂದ 6 ಲಕ್ಷ ಸಾಲ ಪಡೆದಿದ್ದರು.
ಸಾಲ ಹಿಂದಿರುಗಿಸಲು ಆಗದಿದ್ದಾಗ ರಫೀಕ್‌ಗೆ ಕಂಪನಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಮನನೊಂದ ರಫೀಕ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ
ಘಟನೆಯ ಮಾಹಿತಿ ತಿಳಿದ ಬೈಲಹೊಂಗಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಮೈಕ್ರೋಫೈನಾನ್ಸ್ ಕಂಪನಿ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ