ಅತಿಯಾದ ಲೈಂಗಿಕ ಉತ್ಕಟತೆಯ ಸಮಸ್ಯೆಯು (ಅತಿಯಾದ ಲೈಂಗಿಕತೆ) ಒಬ್ಬ ವ್ಯಕ್ತಿಯು ತನ್ನ ಆಲೋಚನೆಗಳು ಮತ್ತು ಲೈಂಗಿಕ ನಡವಳಿಕೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸ್ಥಿತಿಯಾಗಿದ್ದು, ಅವನ ಮನಸ್ಸು ಯಾವಾಗಲೂ ಲೈಂಗಿಕ ಪ್ರಚೋದನೆ ಅಥವಾ ಅತಿ ಲೈಂಗಿಕತೆಯ ಆಲೋಚನೆಗಳಿಂದ ತುಂಬಿರುತ್ತದೆ. ಮತ್ತು ಅವನಿಗೆ ಲೈಂಗಿಕ ಚಟುವಟಿಕೆಗಳನ್ನು ಮಾಡುವ ಬಯಕೆ ಪದೇ ಪದೇ ಬರುತ್ತದೆ. ಇದು ಅವನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಜೊತೆಗೆ ಅವನ ಸಾಮಾಜಿಕ ಮತ್ತು ಭಾವನಾತ್ಮಕ ಅಭ್ಯಾಸಗಳ ಮೇಲೂ ಪರಿಣಾಮ ಬೀರುತ್ತದೆ.
ಅತಿ ಲೈಂಗಿಕತೆ ಅಥವಾ ಲೈಂಗಿಕ ವ್ಯಸನವು ಇತರ ಯಾವುದೇ ವ್ಯಸನದಷ್ಟೇ ಅಪಾಯಕಾರಿ. ಒಬ್ಬ ವ್ಯಕ್ತಿಯು ಲೈಂಗಿಕ ಚಟುವಟಿಕೆಗೆ ವ್ಯಸನಿಯಾದಾಗ, ಅವನ ಸಂಪೂರ್ಣ ಗಮನವು ಲೈಂಗಿಕತೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಇರುತ್ತದೆ. ಅವನು ಬಯಸಿದರೂ ಸಹ, ಅವನು ತನ್ನ ಲೈಂಗಿಕ ಆಸೆಗಳನ್ನು ಮತ್ತು ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಏನಿದು ಲೈಂಗಿಕ ವ್ಯಸನ? ಅದರ ಪರಿಣಾಮವೇನು?: ಲೈಂಗಿಕ ವ್ಯಸನದ ಗಂಭೀರತೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಹಿರಿಯ ಮನೋವೈದ್ಯೆ ಡಾ.ವೀಣಾ ಕೃಷ್ಣನ್ ಅವರು, ಲೈಂಗಿಕ ವ್ಯಸನದ ಪೀಡಿತ ವ್ಯಕ್ತಿಯು ಅಶ್ಲೀಲತೆ ಚಿತ್ರ ವೀಕ್ಷಣೆಯ ಜೊತೆಗೆ ಹಸ್ತಮೈಥುನಕ್ಕೂ ವ್ಯಸನಿಯಾಗುತ್ತಾನೆ. ಅನೇಕ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯು ತನ್ನ ಕಾಮವನ್ನು ಪೂರೈಸಿಕೊಳ್ಳಲು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರೊಂದಿಗೆ ಸಹ ಸಂಬಂಧ ಹೊಂದಲು ಪ್ರಾರಂಭಿಸುತ್ತಾನೆ. ಈ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ಪತ್ತೆಹಚ್ಚದಿದ್ದರೆ, ಸಕಾಲಿಕ ಚಿಕಿತ್ಸೆ ನೀಡದಿದ್ದರೆ, ಆ ವ್ಯಕ್ತಿಯು ತನ್ನ ವ್ಯಸನದಿಂದಾಗಿ ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗುವ ಸಾಧ್ಯತೆಯು ಹೆಚ್ಚಿರುತ್ತದೆ.
ದೈನಂದಿನ ಜೀವನವೂ ಪರಿಣಾಮ: ರೋಗಿಯ ಲೈಂಗಿಕ ವ್ಯಸನವು ಎಷ್ಟು ಹೆಚ್ಚಾಗುತ್ತದೆಯೆಂದರೆ ಅದು ಅವನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನಾವು ಲೈಂಗಿಕ ವ್ಯಸನವನ್ನು ಬೇರೆ ಬೇರೆ ಹೆಸರುಗಳಿಂದ ತಿಳಿದಿದ್ದೇವೆ. ಇದರಲ್ಲಿ ಕಡ್ಡಾಯ ಲೈಂಗಿಕ ನಡವಳಿಕೆ, ಅತಿಯಾದ ಲೈಂಗಿಕತೆ, ಅಶ್ಲೀಲ ಲೈಂಗಿಕತೆ, ಬಲವಂತದ ಲೈಂಗಿಕ ಕ್ರಿಯೆಯು ಸೇರಿರುತ್ತವೆ.
ಲೈಂಗಿಕ ವ್ಯಸನವು ಸಾಮಾನ್ಯವಾಗಿ ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಮಾಡುವ ಕೆಲಸಗಳನ್ನು ಒಳಗೊಂಡಿದೆ. ಉದಾಹರಣೆಗೆ: ಹಸ್ತಮೈಥುನ, ಲೈಂಗಿಕ ಸಂದೇಶಗಳನ್ನು ಓದುವುದು, ಫೋರ್ನ್ ವಿಡಿಯೋ ವೀಕ್ಷಣೆ, ಸೈಬರ್ ಸೆಕ್ಸ್, ಇದಲ್ಲದೆ, ಲೈಂಗಿಕ ವ್ಯಸನದಿಂದ ಬಳಲುತ್ತಿರುವ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಜನರೊಂದಿಗೆ ಲೈಂಗಿಕ ಸಂಬಂಧ ಹೊಂದುವ ಬಯಕೆ ಹೊಂದಿರುತ್ತಾನೆ. ಅಂತಹ ಚಟುವಟಿಕೆಗಳು ಹೆಚ್ಚು ಆದಾಗ ರೋಗಿಯ ವೈಯಕ್ತಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆ ವ್ಯಕ್ತಿಯ ಮಾನಕಸ್ಥಿತಿಯು ಸಹ ಹದಗೆಡಲು ಪ್ರಾರಂಭಿಸುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಲೈಂಗಿಕ ವ್ಯಸನಕ್ಕೆ ಕಾರಣಗಳೇನು?: ಕೆಲವೊಮ್ಮೆ ಲೈಂಗಿಕ ವ್ಯಸನವು ಮಾನಸಿಕ ಅಸ್ವಸ್ಥತೆ, ಅನಾರೋಗ್ಯಕರ ಹಾರ್ಮೋನುಗಳು, ವೀಡಿಯೊಗಳನ್ನು ಅಥವಾ ಅಶ್ಲೀಲತೆಯಂತಹ ವಿಷಯವನ್ನು ನಿರಂತರವಾಗಿ ನೋಡುವುದು ಮೆದುಳಿಗೆ ಹಾನಿಕಾರಕವಾಗುತ್ತದೆ. ಇದರ ಪರಿಣಾಮವಾಗಿ ಯಾವುದೇ ದೈಹಿಕ ಅನಾರೋಗ್ಯವು ಈ ರೋಗಿಗಳಲ್ಲಿ ಕಾಡಬಹುದು ಎಂದು ಡಾ.ವೀಣಾ ಕೃಷ್ಣನ್ ತಿಳಿಸುತ್ತಾರೆ.
ಇದರೊಂದಿಗೆ ಒತ್ತಡ, ಆತಂಕ, ಕಲಿಕಾ ನ್ಯೂನತೆ ಮತ್ತು ಅನಗತ್ಯ ಆಲೋಚನೆಗಳು, ಅನಗತ್ಯ ಪ್ರಚೋದನೆಯ ಪ್ರವೃತ್ತಿಗಳಿಂದಲೂ ವ್ಯಕ್ತಿಯು ಲೈಂಗಿಕ ವ್ಯಸನಿಯಾಗಬಹುದು. ಇತ್ತೀಚಿನ ದಿನಗಳಲ್ಲಿ OTTಯಲ್ಲಿ ಪ್ರಸಾರವಾಗುವ ವೆಬ್ ಧಾರಾವಾಹಿಗಳು ಮತ್ತು ಚಲನಚಿತ್ರಗಳು ಅಂದರೆ ಆನ್‌ಲೈನ್ ಟಿವಿ ಚಾನೆಲ್‌ಗಳು ಜನರನ್ನು ಆಕರ್ಷಿಸುತ್ತವೆ ಹಾಗೂ ರೋಮಾಂಚನಗೊಳಿಸುತ್ತವೆ. ಇದರಿಂದಾಗಿ ಅಂತಹ ಜನರ ಮನಸ್ಸು ಹೆಚ್ಚಿನ ಸಮಯ ಲೈಂಗಿಕತೆಗೆ ಸಂಬಂಧಿಸಿದ ಆಲೋಚನೆಗಳಿಂದ ತುಂಬಿರುತ್ತದೆ. ಇದಲ್ಲದೆ, ಅಂತಹ ವ್ಯಸನದ ಇತಿಹಾಸವನ್ನು ಹೊಂದಿರುವ ಕುಟುಂಬ ಸದಸ್ಯರು ಸಹ ಲೈಂಗಿಕ ವ್ಯಸನಿಯಾಗುವ ಅಪಾಯದಲ್ಲಿರಬಹುದು. ಈ ವ್ಯಕ್ತಿಯಲ್ಲಿ ಇಂತಹ ಚಟ ಬೆಳೆಯಲು ಹಲವು ಮಾನಸಿಕ ಸ್ಥಿತಿಗಳಿವೆ ಎಂದು ಡಾ.ವೀಣಾ ಕೃಷ್ಣನ್ ಹೇಳುತ್ತಾರೆ.