Ad imageAd image

ಮಿನಿ ವಿಧಾನಸಭಾ ಅವರಣದಲ್ಲಿ ಇಂದು ಅತಿಯಾದ ಮಳೆಯಿಂದ ಹಾನಿಗೊಳಗಾದ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕೆಂದು

Bharath Vaibhav
ಮಿನಿ ವಿಧಾನಸಭಾ ಅವರಣದಲ್ಲಿ ಇಂದು ಅತಿಯಾದ ಮಳೆಯಿಂದ ಹಾನಿಗೊಳಗಾದ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕೆಂದು
WhatsApp Group Join Now
Telegram Group Join Now

 ರಾಮದುರ್ಗ ತಾಲೂಕಿನ ಮಿನಿ ವಿಧಾನಸಭಾ ಅವರಣದಲ್ಲಿ ಇಂದು ಅತಿಯಾದ ಮಳೆಯಿಂದ ಹಾನಿಗೊಳಗಾದ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ರಿ ರಾಮದುರ್ಗ ತಾಲೂಕ ಘಟಕ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ, ಜಂಟಿ ಕಾರ್ಯದರ್ಶಿಗಳು ಕೃಷಿ ಇಲಾಖೆ ಬೆಳಗಾವಿ, ಮುಖ್ಯಮಂತ್ರಿಗಳು ಹಾಗೂ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಮತ್ತು ಕೃಷಿ ಸಚಿವರು ಹಾಗೂ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇವರಿಗೆ ತಾಲೂಕಿನ ದಂಡಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಿದರು.

1) ಎಲ್ಲ ಬೆಳೆಗಳಿಗೆ ಪರಿಹಾರವನ್ನು ಒದಗಿಸುವುದು, 2) ಜಿಲ್ಲೆಯಲ್ಲಿ ರೈತರು ಬೆಳೆಯತಕ್ಕಂತಹ ಎಲ್ಲ ಬೆಳೆಗಳು (ಹೆಸರು ಹತ್ತಿ ಸೋಯಾಬಿನ್ ಗೋವಿನ ಜೋಳ ಈರುಳ್ಳಿ ಮುಂತಾದ ಬೆಳೆಗಳು ಅತಿಯಾದ ಮಳೆಯಿಂದ ಪಸಲು ಕೈಗೆ ಬಂದಿದ್ದರು ಫಸಲು ತೆಗೆಯುವ ಹಂತದಲ್ಲಿಯೇ ಅತಿಯಾದ ಮಳೆಯಿಂದ ಕೊನೆಯ ಹಂತದಲ್ಲಿ ಹಲವಾರು ಬೆಳೆಗಳು ಕೊಯ್ಯಲು ಕಟಾವ್ ಕೈಗೆಟ್ಟಕ್ಕದಂತ ಆಗಿದ್ದನ್ನು ಸಮೀಕ್ಷೆ ಮಾಡಿ ಹಾನಿಗೊಳಗಾದ ರೈತರಿಗೆ ಪರಿಹಾರವನ್ನು ಮಂಜೂರು ಮಾಡುಬೇಕು 3) ಹಲವಾರು ಬಾರಿ ಸಂಘಟನೆಯಿಂದ ಬೆಳೆ ಹಾನಿ ಬರಗಾಲು ಪರಿಹಾರಗಳು ಬಗ್ಗೆ ಮನವಿ ಮಾಡಿದರು ಸರಕಾರ ಮತ್ತು ಅಧಿಕಾರಿಗಳು ಯಾವುದೇ ರೀತಿಯಿಂದ ಸ್ಪಂದಿಸಿರುವುದಿಲ್ಲ ಅವುಗಳನ್ನು ಪರಿಶೀಲಿಸಿ ಶೀಘ್ರವಾಗಿ ಕ್ರಮವನ್ನು ಕೈಗೊಳ್ಳಬೇಕು,4) ಈಗಾಗಲೇ ರೈತರು ತಮ್ಮ ಶಿಫಾರಸಿನಂತೆ ಆಯಾ ಬಳೆಗಳಿಗೆ ಆಯಾ ಹೊಬಳಿಯ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಲ್ಲಿ ತಮ್ಮ ಶಿಫಾರಸ್ಸಿನಂತೆ ಬೆಳೆಗಳು ವಿಮಾ ಹಣವನ್ನು ತುಂಬಿದ್ದು ಅತಿಯಾದ ಬೆಳೆಯಿಂದ ಎಲ್ಲ ಬೆಳೆಗಳು ಹಾನಿಗೊಳಿಗಾಗಿದ್ದು ವೀಮಾ ತುಂಬಿದ ಎಲ್ಲ ಬೆಳೆಗಳಿಗೆ ವಿಮಾ ಕಂಪನಿಯಿಂದ ಪರಿಹಾರವನ್ನು ಶೀಘ್ರವಾಗಿ ಒದಗಿಸಿಕೊಡಬೇಕು 5) ಈಗಾಗಲೇ ಹಲವಾರು ಬಾರಿ ಖರೀದಿ ಕೇಂದ್ರವನ್ನು ಸ್ಥಾಪಿಸುವಂತೆ ಮನವಿಗಳನ್ನು ಕೊಟ್ಟರು ಸಹಿತ ಖರೀದಿ ಕೇಂದ್ರವನ್ನು ಸ್ಥಾಪಿಸಿರುವುದಿಲ್ಲ ಇದರಿಂದ ಸರ್ಕಾರಿ ಖರೀದಿಯ ಮೇಲೆ ಅವಲಂಬಿತ ರೈತರು ಹಾನಿಗೊಳಗಾಗಿರುತ್ತಾರೆ ಮುಂಬರುವ ದಿನಗಳಲ್ಲಿ ಖರೀದಿ ಕೇಂದ್ರವನ್ನು ಸ್ಥಾಪಿಸಿ ರೈತರ ಎಲ್ಲಾ ಕಾಳುಗಳನ್ನು ಖರೀದಿಸುವಂತ ಆಗಬೇಕು 6) ಅತಿಯಾದ ಮಳೆಯಿಂದ ಈಗಾಗಲೇ ಬಿತ್ತನೆಯಾಗಿರುವ ಜೋಳ ಕಡಲೆ ಗೋಧಿ ಶೇಂಗಾ ಕಾಳುಗಳು ಮೊಳಕೆ ಒಡೆಯದೆ ಮಣ್ಣಿನಲ್ಲಿ ನಾಶವಾಗಿರುತ್ತದೆ.

ಈ ಎಲ್ಲಾ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಿ ಪರಿಹಾರವನ್ನು ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಪರಿಹಾರ ಒದಗಿಸಲು ಸರ್ಕಾರ ಹಾಗೂ ಅಧಿಕಾರಿಗಳು ವಿಳಂಬವನ್ನು ಮಾಡದೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಬೇಕು ಇಲ್ಲವಾದಲ್ಲಿ ಎಲ್ಲಾ ರೈತ ಸಂಘಟನೆಗಳೊಗೊಂಡು ರಾಜ್ಯದ್ಯಂತ ಉಗ್ರವಾದ ಪ್ರತಿಭಟನೆ ಹೆಮ್ಮಿಕೊಳ್ಳಲಾಗುವುದು ಅಂತಾ ಈ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಹಾಗೂ ತಾಲೂಕಿನ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು

ವರದಿ:- ಮಂಜುನಾಥ ಕಲಾದಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!