Ad imageAd image

ಭಕ್ತರ ಗಮನಕ್ಕೆ: ಮುರುಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

Bharath Vaibhav
ಭಕ್ತರ ಗಮನಕ್ಕೆ: ಮುರುಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ
WhatsApp Group Join Now
Telegram Group Join Now

ಉತ್ತರಕನ್ನಡ : ರಾಜ್ಯದಲ್ಲಿ ಪರಿಸಿದ್ಧವಾದ ಹಿಂದೂ ದೇವಸ್ಥಾನವಾಗಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಸ್ಥಾನದಲ್ಲಿ ಇದೀಗ ವಸ್ತ್ರ ಸಂಹಿತೆ ನಿಯಮ ಜಾರಿಗೆ ಮಾಡಿದ್ದು,

ಮುರುಡೇಶ್ವರದಲ್ಲಿರುವ ಶಿವನ ದರ್ಶನಕ್ಕೆ ಭೇಟಿ ಕೊಡುವ ಭಕ್ತಾದಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕು ಎಂದು ದೇವಸ್ಥಾನದ ಆಡಳಿತ ಸೂಚನೆ ಹೊರಡಿಸಿದೆ.

ಈ ಕುರಿತು, ಭಕ್ತರು ವಸ್ತ್ರಸಂಹಿತೆ ಪಾಲಿಸುವಂತೆ ವಿನಂತಿಸಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಬ್ಯಾನರ್ ಹಾಕಲಾಗಿದೆ. ಪುರುಷರು-ಅಂಗಿ ಧೋತಿ, ಪ್ಯಾಂಟ್ ಮತ್ತು ಕುರ್ತಾ ಪೈಜಾಮ, ಮಹಿಳೆಯರು-ಸೀರೆ, ಚೂಡಿದಾರ ಧರಿಸಿ ದೇವರ ದರ್ಶನ ಮಾಡಬಹುದೆಂದು ತಿಳಿಸಲಾಗಿದೆ.

ದೇವಸ್ಥಾನದ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಿ 2022ರ ಡಿಸೆಂಬರ್ ನಲ್ಲಿ ಸನಾತನ ಹಿಂದೂ ಜನಜಾಗೃತಿ ಸಮಿತಿ ಸ್ಥಳೀಯ ಘಟಕ ಮತ್ತು ವಿವಿಧ ಹಿಂದೂ ಪರ ಸಂಘಟನೆ ವತಿಯಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!