ಭಾರತ ಒಕ್ಕೂಟ ರಾಷ್ಟ್ರವಾಗಿದ್ದು, ಪ್ರಾದೇಶಿಕತೆಯು ರಾಜ್ಯಗಳ ಅಸ್ಮಿತೆಯಾಗಿದೆ, ಕರ್ನಾಟಕವು ಸಹಾ ಒಕ್ಕೂಟ ಭಾರತದ ರಾಜ್ಯಗಳಲ್ಲಿ ಒಂದಾಗಿದ್ದು ಕರ್ನಾಟಕದ ಆಡಳಿತ ಭಾಷೆ ಕನ್ನಡವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಲಸೇ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಕನ್ನಡಿಗರಿಗೇ ಉದ್ಯೋಗ ಸಿಗದಂತ್ತಾಗಿದೆ ಅದರಲ್ಲು ಮುಖ್ಯವಾಗಿ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಅವಕಾಶವೇ ಇಲ್ಲದಂತ್ತಾಗುತ್ತಿರುವುದು ಖಂಡನೀಯವಾಗಿದೆ, ಪ್ರಾದೇಶಿಕತೆ ಉಳಿಯಬೇಕಾದರೇ ಬ್ಯಾಂಕುಗಳು ರಾಜ್ಯದ ಭಾಷೆಯಲ್ಲಿ ಸೇವೆ ನೀಡಬೇಕು ಮತ್ತು ಬ್ಯಾಂಕಿನ ಸಿಬ್ಬಂದಿಗಳು 6 ತಿಂಗಳಿನಲ್ಲಿ ರಾಜ್ಯದ ಭಾಷೆಯನ್ನು ಕಲಿತು ವ್ಯವಹರಿಸಬೇಕೆಂಬ ಆರ್.ಬಿ.ಐ ಮೂಲ ನಿಯಮವಾಗಿದ್ದರೂ ಇದನ್ನು ಪಾಲಿಸದೇ ಉದ್ಧಟತನ ತೋರುತ್ತಿರುವ ಕರ್ನಾಟಕದ ಬ್ಯಾಂಕುಗಳಿಗೆ ಇದು ಕರವೇಯ ನೇರ ಎಚ್ಚರಿಕೆ ಇನ್ನಾದರೂ ಕನ್ನಡ ಮತ್ತು ಕನ್ನಡಿಗರಿಗೆ ಆಧ್ಯತೆ ನೀಡಿ ಇಲ್ಲವಾದರೇ ಕರ್ನಾಟಕ ಬಿಟ್ಟು ತೊಲಗಿ. ಟಿ.ಎ ನಾರಾಯಣಗೌಡರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು.
ವರದಿ ರಾಜು ಮುಂಡೆ