ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ಇವತ್ತು ನಡೆಯಲಿದ್ದು, ಜಾತಿ ಗಣತಿ ವರದಿಯೇ ಪ್ರಮುಖ ಚರ್ಚಾ ವಿಷಯವಾಗಲಿದೆ. ಇಡೀ ರಾಜ್ಯದ ಜನರ ದೃಷ್ಟಿ ಇದೀಗ ಕ್ಯಾಬಿನೆಟ್ ಮೀಟಿಂಗ್ ನತ್ತ ನೆಟ್ಟಿದೆ.
CM ಸಿದ್ದರಾಮಯ್ಯ ನೇತೃತ್ವದ ವಿಶೇಷ ಸಂಪುಟ ಸಭೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ಸಂಜೆ 4ಕ್ಕೆ ಸಭೆ ಆರಂಭವಾಗಲಿದೆ.
ರಾಜ್ಯದ ಎಲ್ಲಾ ಸಮುದಾಯಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಜಾತಿ ಗಣತಿ ವರದಿ ಜಾರಿ ಬಗ್ಗೆ ಸಂಪುಟ ಸಭೆ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಈಗಾಗಲೇ ಬಹಿರಂಗವಾದ ವರದಿ ಬಗ್ಗೆ ಲಿಂಗಾಯತ & ಒಕ್ಕಲಿಗ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಶುರುವಾಗಿದೆ.ಹಿಂದುಳಿದ ವರ್ಗಗಳು ಈ ವರದಿ ಬೆಂಬಲಿಸಿವೆ.
ಲಿಂಗಾಯತ ಹಾಗೂ ಒಕ್ಕಲಿಗ ನಾಯಕರು ಇದನ್ನು ವಿರೋಧಿಸಿದ್ದು, ದೊಡ್ಡಮಟ್ಟದ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಹಲವು ನಾಯಕರು ಬಹಿರಂಗವಾಗಿಯೇ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.