ಬೆಂಗಳೂರು: ಕಾಂಗ್ರೆಸ್ ವರಿಷ್ಠರ ನಿರ್ದೇಶನಗಳನ್ನು ಅನುಸರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶನಿವಾರ ಉಪಹಾರ ಸಭೆಗೆ ಆಹ್ವಾನಿಸಿದ್ದಾರೆ. ಇಂದು ಬೆಳಿಗ್ಗೆ 9.30 ಕ್ಕೆ ಇಬ್ಬರು ನಾಯಕರು ಪರಸ್ಪರ ಪ್ರಮುಖ ಸಭೆ ನಡೆಸಲಿದ್ದಾರೆ.
“ಪಕ್ಷದ ಹೈಕಮಾಂಡ್ ನನ್ನನ್ನು ಮತ್ತು ಅವರನ್ನು(ಡಿ ಕೆ ಶಿವಕುಮಾರ್) ಕರೆದು ಸಭೆ ನಡೆಸುವಂತೆ ಕೇಳಿಕೊಂಡಿತ್ತು. ಆದ್ದರಿಂದ, ನಾನು ಅವರನ್ನು ನಾಳೆ ಉಪಹಾರಕ್ಕೆ ಆಹ್ವಾನಿಸಿದ್ದೇನೆ. ಅವರು ಬಂದಾಗ ನಾವು ಚರ್ಚಿಸುತ್ತೇವೆ” ಎಂದು ಸಿದ್ದರಾಮಯ್ಯ ಹೇಳಿದರು.
“ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಹೈಕಮಾಂಡ್ ಏನು ಹೇಳುತ್ತದೋ ಅದನ್ನು ಕೇಳುತ್ತೇನೆ ಎಂದು ನಾನು ಹೇಳಿದ್ದೇನೆ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇವೆ ಎಂದು ನಾವಿಬ್ಬರೂ ಹೇಳಿದ್ದೇವೆ” ಎಂದು ಅವರು ತಿಳಿಸಿದ್ದಾರೆ.




