Ad imageAd image

ಇಂದು ಮೋದಿಯಿಂದ ಉತ್ತರ ಕರ್ನಾಟಕದ 5 ರೈಲ್ವೆ ನಿಲ್ದಾಣಗಳ ಲೋಕಾರ್ಪಣೆ 

Bharath Vaibhav
ಇಂದು ಮೋದಿಯಿಂದ ಉತ್ತರ ಕರ್ನಾಟಕದ 5 ರೈಲ್ವೆ ನಿಲ್ದಾಣಗಳ ಲೋಕಾರ್ಪಣೆ 
WhatsApp Group Join Now
Telegram Group Join Now

ಬೆಂಗಳೂರು: ಇಂದು ರಾಜ್ಯದ 5 ರೈಲ್ವೆ ನಿಲ್ದಾಣಗಳ ಲೋಕಾರ್ಪಣೆ ನಡೆಯಲಿದೆ. ಬಾಗಲಕೋಟೆ. ಧಾರಾವಾಡ, ಬೆಳಗಾವಿ ಜಿಲ್ಲೆ ಗೋಕಾಕ್, ಕೊಪ್ಪಳ ಜಿಲ್ಲೆ ಮುನಿರಾಬಾದ್, ಗದಗ ರೈಲ್ವೆ ನಿಲ್ದಾಣಗಳನ್ನು ವರ್ಚುಯಲ್ ಮೂಲಕ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಬಾಗಲಕೋಟೆ ಕಾರ್ಯಕ್ರಮದಲ್ಲಿ ಸಚಿವ ವಿ. ಸೋಮಣ್ಣ ಭಾಗವಹಿಸಲಿದ್ದಾರೆ.ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಈ ರೈಲು ನಿಲ್ದಾಣಗಳ ನವೀಕರಣ ಮಾಡಲಾಗಿದೆ.

ದೇಶದ ಒಟ್ಟು 1275 ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದ್ದು, ಮೊದಲ ಹಂತವಾಗಿ ರಾಜ್ಯದ ಐದು ರೈಲು ನಿಲ್ದಾಣಗಳು ನವೀಕರಣಗೊಂಡಿವೆ.

ಈ ನಿಲ್ದಾಣಗಳಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಬಿಂಬಿಸಲಿದೆ. ರೈಲು ನಿಲ್ದಾಣಗಳ ಕಟ್ಟಡ ವಿನ್ಯಾಸವು ಆಯಾ ಪ್ರದೇಶದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದೆ. ಪ್ರತಿ ನಿಲ್ದಾಣವು ಸೋಲಾರ್ ವಿದ್ಯುತ್ ಘಟಕ ಹೊಂದಿದೆ.

ದೇಶಾದ್ಯಂತ ಇಂದು 103 ನವೀಕೃತ ರೈಲು ನಿಲ್ದಾಣಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಈ ನಿಲ್ದಾಣಗಳನ್ನು ನಗರ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗಿದ್ದುಮ ವಿಶ್ರಾಂತಿ ಕೊಠಡಿಮ ವಿಶಾಲವಾದ ಸಂಚಾರ ಪ್ರದೇಶ ಇತರೆ ಸೌಲಭ್ಯ ಒದಗಿಸಲಾಗಿದೆ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಪಾರ್ಕಿಂಗ್ ಸೌಲಭ್ಯ, ಲಿಫ್ಟ್, ಪ್ರಯಾಣಿಕರು ಮತ್ತು ದಿವ್ಯಾಂಗ ಸ್ನೇಹಿ ಸೌಲಭ್ಯ ಕಲ್ಪಿಸಲಾಗಿದೆ. ಬಹು ಮಾದರಿ ಸಂಪರ್ಕದ ಏಕೀಕರಣದೊಂದಿಗೆ ಈ ನಿಲ್ದಾಣಗಳು ಈ ಪ್ರದೇಶದ ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಲಿವೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!