Ad imageAd image

ನಾಳೆ ಮಾದಾರ ಚೆನ್ನಯ್ಯನವರ ಜಯಂತಿ

Bharath Vaibhav
ನಾಳೆ ಮಾದಾರ ಚೆನ್ನಯ್ಯನವರ ಜಯಂತಿ
WhatsApp Group Join Now
Telegram Group Join Now

ಹುಮನಾಬಾದ  : ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಶಿವಶರಣ ಮಾದಾರ ಚೆನ್ನಯ್ಯನವರ 956ನೇ ಜಯಂತಿ ಹಾಗೂ ಒಳಮೀಸಲಾತಿ ಮುನ್ನೋಟ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ನಾಳೆ ಡಿಸೇಂಬರ್ 21ರಂದು ಹಮ್ಮಿಕೊಳ್ಳಲಾಗಿದೆ ಮಾದಿಗ ದಂಡೋರ ಸಮಿತಿ ರಾಜ್ಯ ಕಾರ್ಯಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದರು.

ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಮಾಣಿಕ್ ನಗರದ ಮಾಣಿಕ್ ಸೌಧದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ.ಮಾದಿಗ ಸಮಾಜದ ಹಿರಿಯರು,ಗಣ್ಯರೂ ಆದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ,ಮಾಜಿ ಕೇಂದ್ರ ಮಂತ್ರಿ ಎ.ನಾರಾಯಣ ಸ್ವಾಮಿ,ಸಾಮರಸ್ಯ ವೇದಿಕೆಯ ವಾದಿರಾಜ್,ಶಾಸಕ ಡಾ.ಸಿದ್ದಲಿಂಗಪ ಪಾಟೀಲ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ.ಹೀಗಾಗಿ ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಮಾದಿಗ ಸಮಾಜ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಜಿಲ್ಲಾಧ್ಯಕ್ಷ ರವಿ ನಿಜಾಂಪುರೆ ಹಾಗೂ
ಡಿಎಂಎಂಎಸ್ ಜಿಲ್ಲಾಧ್ಯಕ್ಷ ಪರಮೇಶ್ವರ ಕಾಳಮಂದರಗಿ ಕೂಡ ಮಾತನಾಡಿ,ಜಯಂತಿ ಕಾರ್ಯಕ್ರಮದಲ್ಲಿ ಸಮಸ್ತ ಮಾದಿಗ ಸಮಾಜದ ಹಿರಿಯರು,ಯುವಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಪ್ಪುರಾಜ ಚತುರೆ,ದತ್ತು ಮುದ್ನಾಳ,ರಾಜು ಕಾಣೆ,ಮಹೇಶ ಕಟ್ಟಿಮನಿ,ಪುಟ್ಟರಾಜ್ ಇಟಗಾ,ಸಲೋಮನ್ ವರವಟ್ಟಿ,ಲಖನ್ ದುಬಲಗುಂಡಿ,ಹರೀಶ್ ಗಾಯಕವಾಡ್,ರಾಜು ಮುಗನೋರ್ ಸೇರಿ ಅನೇಕರು ಇದ್ದರು.

ವರದಿ : ಸಜೀಶ್ ಲಂಬುನೋರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!