ಚಿಟಗುಪ್ಪ: ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡ ವರ್ಗಕ್ಕೆ ಸೇರಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ನೇರವು ಕಾರ್ಯಕ್ರಮ ನಾಳೆ ದಿನಾಂಕ 3-9-2024 ಮಂಗಳವಾರ ಬೆಳಗ್ಗೆ 9ಗಂಟೆಗೆ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆಯಿಂದ ತಿಳಿಸಲಾಗಿದೆ.
ಈ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯದೀಶರು ಜಿ.ಎಮ್.ಎಫ್.ಸಿ.ನ್ಯಾಯಾಲಯ ಹುಮನಾಬಾದ ಅವರು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ನೇರವು ಕುರಿತು ಹೆಚ್ಚಿನ ವಿಷಯ ತಿಳಿಸಲಿದ್ದಾರೆ.ಕಾರಣ ಕಾಲೇಜಿನ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾನೂನು ಅರಿವು ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪುರಸಭೆ ಮುಖ್ಯಧಿಕಾರಿ ಹುಸಾಮೋದ್ದಿನ ಬಾಬಾ ಪ್ರಕಟಣೆ ಮೂಲಕ ಆಹ್ವಾನ ನೀಡಿದ್ದಾರೆ.
ವರದಿ:ಸಜೀಶ ಲಂಬುನೋರ್