ಬೆಂಗಳೂರು : ನಟ ದರ್ಶನ್ ತಮ್ಮನ್ನು ಇನ್ಸ್ ಟಾ ಗ್ರಾಂ ಖಾತೆಯಲ್ಲಿ ಅನ್ ಫಾಲೋ ಮಾಡುತ್ತಿದ್ದಂತೆಯೇ ಸುಮಲತಾ ಅವರ ಸ್ಟೇಟಸ್ ಒಂದು ವೈರಲ್ ಆಗಿದೆ.
ತಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿರುವ ನಡೆಗೆ ಸುಮಲತಾ ಅವರು ಪರೋಕ್ಷವಾಗಿ ಚಾಟಿ ಬೀಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.ಸುಮಲತಾ ತಮ್ಮ ಸ್ಟೇಟಸ್ ನಲ್ಲಿ ಈ ರೀತಿ ಬರೆದುಕೊಂಡಿರುವುದು ಕಂಡು ಬಂದಿದೆ.
ಈ ಬಾರಿಯ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಯಾರಿಗೆ ಸಿಗಲಿದೆ ಎಂದರೆ. ..ಸತ್ಯವನ್ನು ತಿರುಚಿದವರು, ವಿನಾಕಾರಣ ಜನರನ್ನು ಹಿಂಸಿಸಿದವರು, ತಮ್ಮ ಆರೋಪವನ್ನು ಬೇರೆಯವರ ಮೇಲೆ ಹೊರೆಸಿದವರು ಹಾಗೂ ಈಗಲೂ ಸಹ ತಮ್ಮನ್ನು ತಾವು ಹೀರೋ ಎಂದು ಕೊಂಡಿರುವವರು.
ಇದರಲ್ಲಿರುವ ಸತ್ಯವನ್ನು ನಿರಾಕರಿಸಿದವರು, ಜನರನ್ನು ಹಿಂಸಿಸಿದವರು, ತಮ್ಮನ್ನು ಹೀರೋ ಎಂದು ಭಾವಿಸಿದವರು ಎಂಬ ಪದಗಳನ್ನು ಗಮನಿಸಿದರೆ ಇದು ದರ್ಶನ್ ಗೆ ಸೂಟ್ ಆಗುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಭೀಕರವಾಗಿ ಚಿತ್ರಹಿಂಸೆ ನೀಡಿ ಕೊಂದ ಆರೋಪದ ಮೇಲೆ ಜೈಲು ಸೇರಿದ್ದ ದರ್ಶನ್ ಗೆ ಮಧ್ಯಂತರ ಜಾಮೀನು ದೊರೆತು ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈಗ ತನಿಖೆ ನಡೆಯುತ್ತಿದ್ದರೂ ಶೂಟಿಂಗ್ ನಲ್ಲಿ ಭಾಗವಹಿಸಬಹುದಾಗಿದೆ.




