ಚಿಕ್ಕೋಡಿ ತೊರನಹಳ್ಳಿ ಭೀಮಾ ಕೆಂಪಣ್ಣಾ ವಡ್ರಾಳೆ ಎಂಬುವರಿಗೆ ಸೆರೀರುವ ಎತ್ತುಗಳು ಉತ್ತರ ಕರ್ನಾಟಕದಲ್ಲಿ ಪ್ರಥಮ ಸ್ಥಾನ.
ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದ ಭೀಮಾ ಕೆಂಪಣ್ಣಾ ಎಂಬುವರಿಗೆ ಸೇರಿರುರುವ ರಾಮ ಮಾರುತಿ ಎಂಬ ಹೆಸರಿನ ಎತ್ತುಗಳು ಹುಕ್ಕೇರಿ ತಾಲೂಕಿನ ಅಮ್ಮನಗಿ ಮಲ್ಲಯ್ಯ ಜಾತ್ರೆಯಲ್ಲಿ ನಡೆದ ಸುಂದರ ಸುಂದರ ಹಾಗೂ ಸದೃಢ ಶರೀರದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕಳಿಸಿಕೊಂಡಿರುತ್ತವೆ.
ಈ ತೋರಣ ಹಳ್ಳಿಯ ವಡ್ರಾಳೆ ಮನೆತನದವರು ಸುಂದರ ಸದೃಢ ಗಾತ್ರದ ಎತ್ತುಗಳನ್ನು ಸಾಕುವ ಹವ್ಯಾಸದ ಬಗ್ಗೆ ಅವರ ಸ್ನೇಹಿತರು ನಮ್ಮೊಂದಿಗೆ ಮಾತನಾಡಿ ಈ ವಡ್ರಾಳೆ ಮನೆತನದವರು ತೋರಣ ಹಳ್ಳಿಯ ಮೊದಲಿನಿಂದ ಅವರ ತಂದೆಯವರಾದ ಕೈಲಾಸ ಕೆಂಪಣ್ಣಾ ವಡ್ರಾಳೆ, ಇಂತಹ ಸುಂದರ ಕಣ್ಣು ಕುಲುಕುವ ದೊಡ್ಡ ಗಾತ್ರದ ಸದೃಢ ಶರೀರ ಹಾಗೂ ಸುಂದರ ಎತ್ತುಗಳನ್ನು ಸಾಕುತ್ತಾ ಬಂದಿದ್ದಾರೆ ಅವರಿಗೆ ಇದೊಂದು ಹವ್ಯಾಸ ಎಂದರು.
ಅವರಿಗೆ ಗ್ರಾಮದ ಎಲ್ಲ ಜನರ ಬೆಂಬಲವಿದೆ ಹಾಗೂ ಅವರ ಮಗನಾದ ಭೀಮಾ ವಡ್ರಾಳೆ ಅವರು ಕೂಡ ಅವರ ತಂದೆಯವರಂತೆ ಎತ್ತುಗಳನ್ನು ಸಾಕುವ ಹವ್ಯಾಸದಲ್ಲಿ ಅವರು ಮೊನ್ನೆ ಹುಕ್ಕೇರಿ ತಾಲೂಕಿನ ಅಮ್ಮನಗಿ ಮಲ್ಲಯ್ಯ ಜಾತ್ರೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಎಂದರು.
ಮೈದುಂಬಿರುವ ರಾಮ ಮಾರುತಿ ಹೆಸರಿನ ಈ ಖಿಲಾರಿ ಖೋಡಿ ಎತ್ತುಗಳು ಅಲಂಕರಿಸಿಕೊಂಡು ಜನರ ನೆತ್ತರ ಅವುಗಳಅತ್ತ ನೋಡುವಂತೆ ಮನಶಳೆಯುತ್ತವೆ ಎಂದರು.
ನಮ್ಮೊಡನೆ ಮಾತನಾಡಿದ ಮಾರುತಿ ಎಸ್ ಬುದಲೆ ಅವರು ಕೂಡ ಇದೇ ರೀತಿಯಾಗಿ ತಿಳಿಸಿದರು ಈ ಸಂದರ್ಭದಲ್ಲಿ ಕೆಂಪಣ್ಣ ವಡ್ರಾಳೆ, ಬಸವರಾಜ್ ಮಾಳಗೆ ಗುತ್ತಿಗೆದಾರರು. ಕೃಷ್ಣಪ್ಪ ಜೋಗೆ, ಬಾಲಕೃಷ್ಣ ದೊಡ್ಡಲಚ್ಚಾಪ್ಪಗೋಳ. ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ




