ಮಂಗಳವಾರ ಕಾಳಗಿ ತಾಲೂಕಿನ ವಚ್ಚಾ ಮತ್ತು ಕೋರವಾರ ಗ್ರಾಮದ ಮಧ್ಯ ಮುಖ್ಯ ರಸ್ತೆ ಸಂಪೂರ್ಣ ಮಳೆ ನೀರು ಅವರಿಸಿಕೊಂಡಿದ್ದು, ಕಲಬುರಗಿ ಯಿಂದ ಚಿಂಚೋಳಿ ಕಡೆಗೆ ಸಂಚಾರಿಸುವ ಎಲ್ಲಾ ವಾಹನಗಳು ಸಂಜೆ 5 ಗಂಟೆಯಿಂದ 7 ಗಂಟೆವರೆಗೂ ಸಂಪೂರ್ಣ ಸ್ಥಗಿತಗೊಂಡಿವೆ.
ಕಲಬುರಗಿ ಅಥವಾ ಚಿಂಚೋಳಿಯಿಂದ ಬಸ್, ಕಾರ್, ದ್ವಿಚಕ್ರ ವಾಹನ, ಆಟೋ ಹೀಗೆ ಅನೇಕ ವಾಹನದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಸಂಜೆ 7 ಗಂಟೆಯಾದರು ತಮ್ಮ ತಮ್ಮ ಗೂಡು ಸೇರಿಕೊಳ್ಳಲು ಚಡಪಡಿಸುತ್ತಿದ್ದರು. ಅನೇಕ ವಾಹನ ಸವಾರರು ನೀರು ಧಾಟ್ಟಲು ಬಹಳಷ್ಟು ಪ್ರಯತ್ನ ಪಟ್ಟರು. ಕೊನೆಗೆ ವಾಹನ ಸವಾರರು, ನೀರು ಕಮ್ಮಿ ಆಗೋವರೆಗೂ ನಿಂತು, ಹೋಗಿದ್ದರು.
ವರದಿ: ಹಣಮಂತ ಕುಡಹಳ್ಳಿ



