Ad imageAd image

ಮಲಪ್ರಭಾ ನದಿಗೆ ವಿಷಯುಕ್ತ ಕೊಳಚೆ ನೀರು:  ತ್ಯಾಜ್ಯ ವಸ್ತುಗಳೇ ಕಂಟಕ

Bharath Vaibhav
ಮಲಪ್ರಭಾ ನದಿಗೆ ವಿಷಯುಕ್ತ ಕೊಳಚೆ ನೀರು:  ತ್ಯಾಜ್ಯ ವಸ್ತುಗಳೇ ಕಂಟಕ
WhatsApp Group Join Now
Telegram Group Join Now

ಬೆಳಗಾವಿ: ಹೌದು ಕಿತ್ತೂರು ಕರ್ನಾಟಕದ ಜೀವನದಿ ನಮ್ಮ ಹೆಮ್ಮೆಯ ಕಿತ್ತೂರು ಕರ್ನಾಟಕದ ಜೀವನದಿ ಮಲಪ್ರಭಾ ನದಿಗೆ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣ ಪಂಚಾಯಿತಿ ವಿವಿಧ ವಾರ್ಡ್ ಗಳಿಂದ ಮಲಪ್ರಭಾ ನದಿಗೆ ನೇರವಾಗಿ ದಿನನಿತ್ಯ ಬಿಡಲಾಗುತ್ತಿರುವ ವಿಷಯುಕ್ತ ಕೊಳಚೆ ನೀರು ಮತ್ತು ತ್ಯಾಜ್ಯ ವಸ್ತುಗಳೇ ಕಂಟಕವಾಗುತ್ತಿರುವ ಪರಿಸ್ಥಿತಿ ಬಗ್ಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ವಿಶೇಷ ವರದಿಯನ್ನು ತಯಾರಿಸಿ ಬೆಳಕು ಚೆಲ್ಲಿದ್ದಾರೆ.

ಅಷ್ಟಕ್ಕೂ ಮಲಪ್ರಭಾ ನದಿ ಕಣಕುಂಬಿಯಲ್ಲಿ ಉಗಮವಾಗಿ ಖಾನಾಪುರ ಪಟ್ಟಣವನ್ನು ಪ್ರವೇಶಿಸುತ್ತದೆ. ಆದ್ರೇ ಕಳೆದ 10 ವರ್ಷಗಳಿಂದ ಈ ಕೊಳಚೆಯುಕ್ತ ನೊರೆಯುಕ್ತ ವಿಷದ ನೀರು ಮತ್ತು ತ್ಯಾಜ್ಯ ವಸ್ತುಗಳು ನೇರವಾಗಿ ಮಲಪ್ರಭಾ ನದಿಯ ಓಡಲು ಸೇರುತ್ತಿದ್ದು ಇತ್ತೀಚೆಗೆ ಇದರ ಮಟ್ಟ ತುಂಬಾ ಜಾಸ್ತಿಯಾಗಿ ರಾಸಾಯನಿಕ ವಸ್ತುಗಳು ಸಹ ಈ ಮಲಪ್ರಭಾ ನದಿಯ ಓಡಲು ಸೇರುತ್ತಿರುವ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ.

ಇನ್ನೊಂದು ಕಡೆ ಈ ವಿಷಯುಕ್ತ ನೀರು ಹಾಗೂ ತ್ಯಾಜ್ಯ ವಸ್ತುಗಳು ಒಂದಾಗಿ ಖಾನಾಪುರದ ವಿವಿಧ ಹಳ್ಳಿಗಳ ಮಲಪ್ರಭಾ ನದಿಯ ಹರಿವಿನ ಮೂಲಕ ಪ್ರವೇಶ ಮಾಡುತ್ತಿದ್ದು. ಗ್ರಾಮೀಣ ಪ್ರದೇಶದ ರೈತರು ದನಕರುಗಳನ್ನು ನೀರು ಕುಡಿಸುವುದಕ್ಕೆ ಹಾಗೂ ಬೆಳೆಗಳಿಗೆ ಆಯಿಸುವುದು. ಕುಡಿಯುವ ನೀರು ಬಳಕೆಗೆ ಬಳಸುತ್ತಿರುವುದು ಗೊತ್ತಿದ್ದರೂ ಖಾನಪುರ ಪಟ್ಟಣ ಪಂಚಾಯಿತಿಯವರು ಮಾತ್ರ ನೇರವಾಗಿ ಮಲಪ್ರಭಾ ನದಿಗೆ ಈ ಕೊಳಚೆ ನೀರು ಮತ್ತು ತ್ಯಾಜ್ಯ ವಸ್ತುಗಳನ್ನು ಬಿಟ್ಟು ಕೈ ತೊಳೆದುಕೊಂಡು ಬಿಡುತ್ತಿದ್ದಾರೆ.

ಮತ್ತೊಂದು ಕಡೆ ಇಲ್ಲಿ ಹೆಸರಿಗೆ ಮಾತ್ರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ ಪುಣ್ಯಾತ್ಮರು ತ್ಯಾಜ್ಯ ನೀರು ಮತ್ತು ಸಂಸ್ಕರಣಾ ಘಟಕ ಕಾಮಗಾರಿ ಪ್ರಾರಂಭ ಮಾಡಿ ಕಟ್ಟಡ ಮತ್ತು ಟ್ಯಾoಕ್ ನಿರ್ಮಿಸಿ ಅರೆಬರೆ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ. ಇನ್ನೊಂದು ಕಡೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯವರು ಸಹ ಹೆಸರಿಗೆ ಮಾತ್ರ ಇವರ ಮೇಲೆ ಪ್ರಕರಣ ಕೈಗೊಂಡು ಸುಮ್ಮನಿದ್ದಾರೆ.

ಆದ್ರೇ ವಿಷಯುಕ್ತ ಕೊಳಚೆ ನೀರು ಮತ್ತು ತ್ಯಾಜ್ಯ ವಸ್ತುಗಳು ಮಾತ್ರ ದಿನನಿತ್ಯ ಟ್ರ್ಯಾಕ್ಟರ್ ಗಟ್ಟಲೇ ನದಿಯ ಒಡಲನ್ನು ಸೇರುತ್ತಿದೆ. ಆದ್ದರಿಂದ ಸ್ಥಳೀಯರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಒಳಚರಂಡಿ ಮಂಡಳಿ ಅಭಿಯಂತರರು ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಹಾಗೂ ಬೆಳಗಾವಿ ಪರಿಸರ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ಮಲಪ್ರಭಾ ನದಿಗೆ ಈ ಕೊಳಚೆ ನೀರು ಮತ್ತು ತ್ಯಾಜ್ಯವಸ್ತುಗಳು ಸೇರುವುದನ್ನು ತಪ್ಪಿಸುವರೇ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!