Ad imageAd image

ಟ್ರಾಕ್ಟರ್ ಡೈವರಗಳ ಚಳಿ ಬಿಡಿಸಿದ ಘಟಪ್ರಭಾ ಸಿಪಿಆಯ್ ಮುಲ್ಲಾ

Bharath Vaibhav
ಟ್ರಾಕ್ಟರ್ ಡೈವರಗಳ ಚಳಿ ಬಿಡಿಸಿದ ಘಟಪ್ರಭಾ ಸಿಪಿಆಯ್ ಮುಲ್ಲಾ
WhatsApp Group Join Now
Telegram Group Join Now

ಘಟಪ್ರಭಾ : ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಕರ್ಕಶ ದ್ವನಿವರ್ದಕ ಅಳವಡಿಸಿದ ಟ್ರ್ಯಾಕ್ಟರಗಳನ್ನು ತಡೆದು ಪೊಲಿಸ್ ಇನ್ಸ್ಪೆಕ್ಟರ್ ಎಚ್,ಡಿ,ಮುಲ್ಲಾ ಇವರು ಟ್ರ್ಯಾಕ್ಟರ್ ಡ್ರೈವರುಗಳ ಚಳಿ ಬಿಡಿಸಿದ್ದಾರೆ.

ದಿನನಿತ್ಯ ಶಬ್ದದ ಮಿತಿಯೆಯಿಲ್ಲದೆ ಹಗಲು ಮತ್ತು ರಾತ್ರಿಯ ಪರಿವೆಯಿಲ್ಲದೆ ನಿಯಮಬಾಹಿರವಾಗಿ ಟ್ರ್ಯಾಕ್ಟರಗಳಲ್ಲಿ ಡಿಜೆ ಮ್ಯೂಸಿಕ್ ಸಿಸ್ಟಮ್ಗಳಲ್ಲಿ ಅಳವಡಿಸಿ ಮನಸ್ಸಿಗೆ ಬಂದ ಜಾನಪದ ಹಾಡುಗಳನ್ನು ಹಾಕೊಂಡು ರಸ್ತೆಗಳಲ್ಲಿ ಸಂಚರಿಸಿ ಜನರ ನೆಮ್ಮದಿ ಹಾಳು ಮಾಡುತಿದ್ದರು.

ಅದರ ಜೊತೆಗೆ ಟ್ರ್ಯಾಕ್ಟರ್ ಪಕ್ಕದಲ್ಲಿ ಬರುವ ವಾಹನ ಸಂಚಾರಗಳಿಗೆ ತೊಂದರೆಯಾಗಿ ಹಲವು ಅಪಘಾತಗಳಾಗಿವೆ.
ದ್ವನಿವರ್ಧಕದಿಂದ ಬರುವ ಹೆಚ್ಚಿನ ಶಬ್ದಗಳಿಂದ ಸಾರ್ವಜನಿಕ ಆರೋಗ್ಯಕ್ಕೂ ಹಾನಿಯಾಗುವ ಸಂಭವವಿದೆ.

ರೈತರೆಂಬ ಉದ್ದೇಶದಿಂದ ಸಿಪಿಆಯ್ ಇವರು ಹಲವಾರು ಬಾರಿ ಮೌಖಿಕವಾಗಿ ಹೇಳಿದರೂ ಸಹ ಕ್ಯಾರೆ ಅನ್ನದ ಡ್ರೈವರುಗಳ ಟ್ರ್ಯಾಕ್ಟರ ತಡೆದು ಅವರ ಪರವಾಣಿಗೆ ಪರಿಶಿಲಿಸಿ ಸ್ಥಳದಲ್ಲಿಯೆ ದಂಡ ವಿದಿಸಿ ಅಳವಡಿಸಿದ್ದ ಕರ್ಕಶ ದ್ವನಿವರ್ದಕಗಳನ್ನು ತೆಗೆದು ಹಾಕಿ ಬಿಸಿ ಮುಟ್ಟಿಸಿ ಇನ್ನೊಮ್ಮೆ ಅಳವಡಿಸದಿರಲು ಖಡಕ ಎಚ್ಚರಿಕೆ ನೀಡಿದ್ದಾರೆ,

ಸಿಪಿಅಯ್ ಎಚ್,ಡಿ, ಮುಲ್ಲಾ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಘಟಪ್ರಭಾದ ಸಾರ್ವಜನಿಕರು, ರಸ್ತೆ ಪಕ್ಕದ ಅಂಗಡಿ ಮಾಲಿಕರು ಶ್ಲ್ಯಾಘಿಸಿದ್ದಾರೆ.

ವರದಿ : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!