ಮೊಳಕಾಲ್ಮೂರು :- ಪ್ರತಿಯೊಬ್ಬ ವ್ಯಕ್ತಿಯೂ ಸಹ ಸ್ವಯಂ ಪ್ರೇರಿತವಾಗಿ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಪಿಐ ವಸಂತ್ ಅಸೋಡೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಪಟ್ಟಣದಲ್ಲಿ ಶುಕ್ರವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾ ಪದ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ಸಂಚಾರಿ ನಿಯಮಗಳ ಬಗ್ಗೆ ತಿಳಿಸಿದರು. ನಿಮ್ಮ ಸುತ್ತಮುತ್ತ ಪರಿಸರದಲ್ಲಿ ಕುಡಿದು ವಾಹನ ಚಾಲನೆ ಮಾಡಿದರೆ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದರೆ ಅಂತವರಿಗೆ ನೀವು ತಿಳಿ ಹೇಳಬೇಕು ಎಂದು ಮಕ್ಕಳಿಗೆ ತಿಳಿಸಿದರೆ. ಯಾವುದೇ ಕಾರಣಕ್ಕೂ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದರೆ ಕುಡಿದು ವಾಹನ ಚಾಲನೆ ಮಾಡಿದರೆ ಅಂತವರಿಗೆ ಪೊಲೀಸರಿಂದ ದಂಡ ವಿಧಿಸಲಾಗುವುದು.
ಸ್ಕೂಲಿನ ಮಕ್ಕಳು ಆಟದಲ್ಲಿ ಬರುವಾಗ ಹೆಚ್ಚಿನ ಸುರಕ್ಷತೆ ಹೊಂದಿರಬೇಕು ಆಟೋದವರು ಎಲ್ಲರೂ ಇನ್ಸೂರೆನ್ಸ್ ಮಾಡಿಸಿಕೊಂಡಿರಬೇಕು. ಚಿಕ್ಕ ಮಕ್ಕಳು ಘಾಡಿ ಓಡಿಸಿದರೆ ತಂದೆ ತಾಯಿಗಳ ಮೇಲೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಿದರು.
18 ವರ್ಷದ ಮೇಲ್ಪಟ್ಟ ಎಲ್ಲರೂ ಗಾಡಿ ಓಡಿಸಬಹುದು ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ಗಾಡಿ ಓಡಿಸಬಾರದು ಎಂದರು
ಕಾರು ಓಡಿಸುವವರು ಸೀಟ್ ಬೆಲ್ಟ್ ಹಾಕೋದು ವಾಹನಗಳನ್ನು ಆರು ತಿಂಗಳಿಗೊಮ್ಮೆ ಸರ್ವಿಸ್ ಮಾಡಿಸಬೇಕು, ರಸ್ತೆಯಲ್ಲಿ ಹೋಗುವಾಗ ಸುರಕ್ಷಿತವಾಗಿ ಅಂತರ ಕಾಯ್ದುಕೊಳ್ಳಬೇಕು ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನೆ ಚಾಲನೆ ಮಾಡಬಾರದು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಂಚಿತವಾಗಿ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಜಾತ ಏರ್ಪಡಿಸಿ ಮುಖ್ಯ ರಸ್ತೆಯಿಂದ. ಸಂಚಾರಿ ನಿಯಮಗಳ ಘೋಷಣೆಗಳನ್ನು ಕೂಗುತ್ತಾ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ವಸಂತ ಅಸೋದೆ, ಸಬ್ ಇನ್ಸ್ಪೆಕ್ಟರ್ ಪಾಂಡುರಂಗಪ್ಪ, ಸಿಬ್ಬಂದಿಗಳಾದ ದೇವರಾಜ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ