ಸೇಡಂ: ತಾಲೂಕಿನ ಮುಧೋಳ್, ಮಳಖೇಡ, ಕೊಡ್ಲಾ, ಮತ್ತು ಸೇಡಂ ಪಟ್ಟಣದ ಜನರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಸ್ವಲ್ಪನೂ ಅರಿವಿಲ್ಲ ಅನಿಸುತ್ತೆ.
ಈ ಬಾಗದಲ್ಲಿ ಅತಿ ಹೆಚ್ಚಾಗಿ ಸಿಮೆಂಟ್ ಕಾರ್ಖಾನೆಗಳಿದ್ದರಿಂದ ಲಾರಿಗಳ ಕಾಟ ಹೆಚ್ಚಾಗಿರುತ್ತದೆ, ಅಂತಹ ಸಮಯದಲ್ಲಿ ಜನರು ತಮ್ಮ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದೆ ಹೋಗುತ್ತಾರೆ ಅದರಿಂದ ಅಪಘಾತವಾದಾಗ ಅವರ ಜೀವಕ್ಕೆ ಹಾನಿ ಉಂಟಾಗುತ್ತದೆ ಎಂಬ ಭಯವಿಲ್ಲದೆ ಹೋಗುತ್ತಾರೆ.
ಒಂದು ವೇಳೆ ಪೊಲೀಸರು ಗಡಿ ನಿಲ್ಲಿಸಿದರೆ ಅವರಿಗೆ ಪರಿಚಯ ಇರುವ ನಾಯಕರಿಂದ ಕರೆ ಮಾಡಿಸಿ ರಾಜಕೀಯ ಮಾಡುತ್ತಾರೆ ಎಂದು ಈ ಹಿಂದೆ ವರದಿ ಆಗಿತ್ತು. ಇಲ್ಲಿ ಒಂದು ಪ್ರಶ್ನೆ ಮೂಡಿ ಬರುತ್ತೆ. ನಿಮ್ಮ ಜೀವಕ್ಕೆ ನೀವೇ ಗ್ಯಾರಂಟಿ ಇರಬೇಕು ಇನ್ಯಾರೋ ಬಂದು ನಿಮ್ಮನು ರಕ್ಷಿಸುವ ಅವಶ್ಯಕತೆ ನಿಮಗ್ಯಾಕೆ ಬರಬೇಕು.
ಹೆಲ್ಮೆಟ್ ಧರಿಸದೆ ಹೋದಲ್ಲಿ ದೊಡ್ಡ ಪ್ರಮಾಣದ ಅಪಘಾತ ಆದಾಗ ಅದುವೇ ತಮ್ಮನ್ನು ರಕ್ಷಿಸುವುದು ಎಂಬುದನ್ನು ಜನರು ಮರಿಬಾರದು. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ದಂಡ ವಿಧಿಸಬಹುದಾದ ಅಪರಾಧವಾಗಿದೆ. 1988 ರ ಮೋಟಾರು ವಾಹನ ಕಾಯಿದೆಯ ಸೆಕ್ಷನ್ 129 ರ ಪ್ರಕಾರ, ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಬಹುದು.
ಪೊಲೀಸರು ಯಾಕೆ ಈ ನಿಯಮಗಳ ಪ್ರಕಾರ ಇಲ್ಲಿನ ಜನರಿಗೆ ದಂಡ ವಿಧಿಸುವುದಿಲ್ಲವೇ ಎಂಬ ಪ್ರಶ್ನೆ ಕೂಡ ಇಲ್ಲಿ ಮೂಡಿಬರುತ್ತದೆ. ಪೊಲೀಸರ ಎದುರಲ್ಲೇ ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವುದು ಕಂಡರೆ ಈ ಬಾಗದ ಜನರಿಗೆ ಅದೆಷ್ಟು ನಿರ್ಲಕ್ಷ್ಯ ಎಂಬುದು ಕಂಡು ಬರುತ್ತದೆ.
ಮೊದಲು ಸಾರ್ವಜನಿಕರು ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ಅವರು ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದರಿಂದ ಅಪಘಾತದಲ್ಲಿ ಅವರಿಗೆ ಗಾಯಲುಗಳಗಳಿ,ಅಥವಾ ತಮ್ಮ ಪ್ರಾಣವನ್ನೇ ಕಳೆದುಕೊಂಡರೆ ತನ್ನ ಇಡೀ ಕುಟುಂಬ ರೋಡ್ ಮೇಲೆ ಬರುತ್ತೆ ಎಂಬುದನ್ನು ದ್ವಿಚಕ್ರ ವಾಹನ ಚಾಲಕರು ತಿಳಿಯಬೇಕಿದೆ.
ನಾವು ನಮ್ಮ ಕುಟುಂಬದ ಜೊತೆ ಸಂತೋಷವಾಗಿ ಇರಬೇಕಾದರೆ ನಮ್ಮ ಜಾಗೃತಗಳಲ್ಲಿ ನಾವು ಇರಬೇಕು ಎಂದು ಡಾ. ಮಧುಸೂಧನ್ ರೆಡ್ಡಿ ಪಾಟೀಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮೆದಕ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಾಗದಲ್ಲಿ ಹಲವು ಕಂಪನಿಗಳಿವೆ ಲಾರಿಗಳ ಸಂಚಾರ ಜಾಸ್ತಿ ಇರುತ್ತದೆ ಸಣ್ಣ ಅಪಘಾತಕ್ಕೆ ದೊಡ್ಡ ಪ್ರಮಾಣದ ಅನಾಹುತಗಳು ಆಗುವ ಸಾದ್ಯತೆ ಇದೆ. ಅದ ಕಾರಣ ಸಂಬಂಧಪಟ್ಟ ತಾಲೂಕ ಅಧಿಕಾರಿಗಳು ಕೂಡಲೇ ಜನರಿಗೆ ಟ್ರಾಫಿಕ್ ನಿಯಮಗಳ ಅರಿವು ಮೂಡಿಸುವ ಕೆಲಸ ತೆಗೆದುಕೊಳ್ಳಿ ಎಂಬುದು ಸ್ಥಳೀಯರ ಅಭಿಪ್ರಾಯ.
ವರದಿ: ವೆಂಕಟಪ್ಪ ಸುಗ್ಗಾಲ್