Ad imageAd image

ಟ್ರಾನ್ಸ್ಲೇಷನ್ ಯಡವಟ್ಟು : ಸಿದ್ದರಾಮಯ್ಯ ಕೆಂಡಾಮಂಡಲ

Bharath Vaibhav
ಟ್ರಾನ್ಸ್ಲೇಷನ್ ಯಡವಟ್ಟು : ಸಿದ್ದರಾಮಯ್ಯ ಕೆಂಡಾಮಂಡಲ
WhatsApp Group Join Now
Telegram Group Join Now

ಬೆಂಗಳೂರು : ಆನ್ಲೈನ್ ನಲ್ಲಿ ಟ್ರಾನ್ಸ್ಲೇಷನ್ ಯಡವಟ್ಟು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದೀಗ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಕ್ಯಾಪ್ಷನ್ ನಲ್ಲೇ ಅವಾಂತರ ಸೃಷ್ಟಿಯಾಗಿದ್ದು ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.

ಮೆಟಾ ಸಂಸ್ಥೆಯ ಗೂಗಲ್ ಟ್ರಾನ್ಸ್ಲೇಷನ್ ಎಡವಟ್ಟು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ದಿವಂಗತ ಸರೋಜಾದೇವಿ ಅಂತಿಮ ದರ್ಶನಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಸುದ್ದಿಯ ಪೋಸ್ಟ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಇದನ್ನು ಮೆಟಾ ಟ್ರಾನ್ಸಲೇಟ್‌ ಮಾಡುವ ವೇಳೆ ತಪ್ಪಾಗಿ ತರ್ಜುಮೆ ಮಾಡಿದೆ.

ಟ್ರಾನ್ಸ್ಲೇಷನ್ ಆಗುವ ವೇಳೆ “Chief Minister Siddaramaiah passed away yesterday multilingual star, senior actress B.Sarojadevi Took darshan of Sarojadevi’s earthly body and paid his last respects. ಎಂದು ಪೋಸ್ಟ್ ನಲ್ಲಿ ಟ್ರಾನ್ಸಲೇಷನ್ ಆಗಿದೆ

ಇಡೀ ಕ್ಯಾಪ್ಷನ್ ಪೂರ್ತಿ ತಪ್ಪಾಗಿದ್ದು ಪೋಸ್ಟ್ ಓದಿದ ಪ್ರತಿಯೊಬ್ಬರು ಕಕ್ಕಾಬಿಕ್ಕಿ ಆಗಿದ್ದಾರೆ. ಮೆಟಾ ಸಂಸ್ಥೆಯ ತಂತ್ರಜ್ಞಾನ ಯಡವಟ್ಟು ಸಂಬಂಧ ಕಮೆಂಟ್ಸ್ ಮಾಡಿ ನೆಟ್ಟಿಗರು ಕಾಲೆಳೆದಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!