ಇಳಕಲ್ : ಬಸ್ ನಿಂದ ಇಳಿಯುವ ಭರದಲ್ಲಿ ಕೈಚಿಲವನ್ನು ಬಸ್ ನಲ್ಲಿಯೇ ಮರೆತು ಹೋಗಿದ್ದ ಪ್ರಯಾಣಿಕರಿಗೆ ಇಳಕಲ್ ಸಾರಿಗೆ ಘಟಕ ವ್ಯವಸ್ಥಾಪಕ ಎ. ಎಸ್. ಬಿರಾದಾರ್ ವಾರಸುದಾರರಿಗೆ ಒಪ್ಪಿಸಿದರು.
ಇಳಕಲ್ ನಗರದಿಂದ ಹಿರೇಕೋದಾಗಲಿ ಗ್ರಾಮಕ್ಕೆ ತೆರಳಲು ಸುನಂದಾ ಸಿದ್ದಯ್ಯ ಮೇಲಿನಕೊಪ್ಪ ಎಂಬ ಮಹಿಳೆ ತನ್ನ ಗ್ರಾಮದಲ್ಲಿ ಬಸ್ ನಿಂದ ಕೆಳಗಿಳಿಯುವಾಗ ಅರ್ಧ ತೊಲೆ ಬಂಗಾರದ ಆಭರಣ ಹಾಗೂ 6 ಸಾವಿರ ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಬಸ್ಸಿನಲ್ಲಿಯೇ ಬಿಟ್ಟು ತನ್ನ ಚಿಕ್ಕ ಮಗುವಿನೊಂದಿಗೆ ಹೊರಟು ಹೋಗಿದ್ದರು. ಕೊನೆಯದಾಗಿ ಬಸ್ ನಿಲ್ದಾಣದಲ್ಲಿ ಚಾಲಕ ಬಿ. ವಿ. ಪಾಟೀಲ್ ಹಾಗೂ ನಿರ್ವಾಹಕ ಮಲ್ಲಪ್ಪ ಗೋತಗಿ ಬಗನ್ನು ಗಮನಿಸಿ ಸಾರಿಗೆ ಘಟಕದಲ್ಲಿ ಒಪ್ಪಿಸಿದ್ದರು.
ಬ್ಯಾಗ್ ಕಳೆದುಕೊಂಡ ಸುನಂದಾ ಗಾಬರಿಯಿಂದ ಬಸ್ ನಿಲ್ದಾಣದಲ್ಲಿ ವಿಚಾರಿಸಿದಾಗ ಘಟಕ ವ್ಯವಸ್ಥಾಪಕ ಬಿರಾದಾರ್ ಬ್ಯಾಗ್ ಅವರದ್ದೇ ಎಂದು ಖಚಿತಪಡಿಸಿಕೊಂಡು ಒಪ್ಪಿಸಿದರು. ಸಿಬ್ಬಂದಿಗಳ ಈ ಕಾರ್ಯಕ್ಕೆ ಸುನಂದಾ ಹಾಗೂ ಅವರ ಕುಟುಂಬಸ್ಥರು ಅಭಿನಂದಿಸಿದರು.
ಬಂಗಾರದ ಆಭರಣ ಹಾಗೂ ನಗದು ಇದ್ದ ಬಸ್ ನಲ್ಲಿ ಮರೆತುಹೋಗಿದ್ದ ವ್ಯಾನಿಟಿ ಬ್ಯಾಗ್ ನ್ನು ಘಟಕ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಸುನಂದಾ ಅವರಿಗೆ ಒಪ್ಪಿಸುತ್ತಿರುವದು.
ವರದಿ: ದಾವಲ್ ಶೇಡಂ




