ನಿಪ್ಪಾಣಿ : ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ನಿಪ್ಪಾಣಿ ತಾಲೂಕಿನ ಬೇಡಕೀಹಾಳದ ದೂಧಗಂಗಾ ಸೇತುವೆ ವಾಹನಗಳ ಭಾರ ತಾಳಲಾರದೆ ಸೇತುವೆ ಕಂಪಿಸುತಿದೆ. ಸಂರಕ್ಷಣೆ ಕಂಬಗಳು ಮುರಿದು, ರಸ್ತೆಯಲ್ಲಿ ತಗ್ಗು ಗುಂಡಿಗಳಿಂದ ದಯನೀಯ ಸ್ಥಿತಿ ಉಂಟಾಗಿದೆ. ಸೇತುವೆ ಕುಸಿಯುವ ಮುನ್ನ,ಅಪಘಾತಕ್ಕೆ ಮೊದಲು ಸಂಬಂಧಿಸಿದ ಇಲಾಖೆ, ಸ್ಥಾನಿಕ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಸ್ಪಂದಿಸುವರೇ ? ಕಾಯ್ದು ನೋಡಬೇಕು.
ಹಾಗಾದರೆ ಬನ್ನಿ ಕಂಪಿಸುತ್ತಾ ಭಾರ ಹೊತ್ತು ಶತಮಾನೋತ್ಸವದತ್ತ ಹೆಜ್ಜೆ ಹಾಕುತ್ತಿರುವ ದೂದಗಂಗಾ ಸೇತುವೆ ದಯನೀಯ ಸ್ಥಿತಿ ಕಣ್ಣಾರೆ ನೋಡಿ. ಒಟ್ಟು 5. ಸನ್ 1965 ರಲ್ಲಿ ಬೇಡಕಿಹಾಳ ಗ್ರಾಮದ ಮೊದಲ ಶಾಸಕರಾದ ದಿವಂಗತ ಸಿದಗೌಡ ಪಾಟೀಲ ಎಸ್ ಎಸ್ ಪಾಟೀಲರ ವಿಶೇಷ ಪ್ರಯತ್ನದಿಂದ ಆಗಿನ ಶಾಸಕರಾದ ವಿಶ್ವನಾಥ್ ಕತ್ತಿ , ವಿ. ಎಲ್ ಪಾಟೀಲರ ಸಹಕಾರದಿಂದ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ನವರು ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ್ದರು. ಕೇಂದ್ರ ಸಚಿವ ಬಿ.ಶಂಕರಾನಂದ,ದೇಶಭಕ್ತ ರತ್ನಪ್ಪಣ್ಣಾ ಕುಂಬಾರ, ಚಿದಾನಂದ ಕೋರೆಯವರ ಮುಖ್ಯ ಉಪಸ್ಥಿತಿಯಲ್ಲಿ ಸೇತುವೆ ಉದ್ಘಾಟನೆಯಾಗಿತ್ತು. ನಿರಂತರ ಆರು ದಶಕಗಳ ಸೇವೆ ನೀಡಿದ ದೂಧಗಂಗಾ ಸೇತುವೆ ಸದ್ಯ ಕಂಪಿಸುತ್ತಿದೆ.ಶಿಥಿಲಾವಸ್ಥೆಗೆ ತಿರುಗಿದೆ. ಆದ್ದರಿಂದ ಬಂದರು ಇಲಾಖೆ,ಸರ್ಕಾರ, ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವುದೇ ? ಕಾಯ್ದು ನೋಡಬೇಕು.
ವರದಿ : ಮಹಾವೀರ ಚಿಂಚಣೆ




