Ad imageAd image

ನಕಲಿ ವಸ್ತುಗಳನ್ನು ತಯಾರಿಸುವ ವೈದ್ಯನಿಂದ ಸಿಬ್ಬಂದಿ ಮೇಲೆ ಹಲ್ಲೆ,ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ,

Bharath Vaibhav
ನಕಲಿ ವಸ್ತುಗಳನ್ನು ತಯಾರಿಸುವ ವೈದ್ಯನಿಂದ ಸಿಬ್ಬಂದಿ ಮೇಲೆ ಹಲ್ಲೆ,ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ,
WhatsApp Group Join Now
Telegram Group Join Now

ಗೋಕಾಕ : ತಾನು ತಯಾರಿಸುತಿದ್ದ ನಕಲಿ ವಸ್ತುಗಳ ಬಗ್ಗೆ ಬೇರೆಯವರಿಗೆ ಹೇಳುತಿದ್ದಿಯಾ ಅಂತಾ ಮನೆಗೆ ಕರೆಯಿಸಿ ಬೆಳಗಾವಿಯ ವೈದ್ಯನೊಬ್ಬ ಗೋಕಾಕ ತಾಲೂಕಿನ ಶಿಂದಿಕುರುಬೇಟ ಗ್ರಾಮದ ಪ್ರಕಾಶ ಮನವಾಡೆ ಎಂಬುವವರ ಮೇಲೆ ಮನಸೊ ಇಚ್ಚೆ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು ಒಂದು ವರ್ಷಗಳಿಂದ ಬೆಳಗಾವಿಯ ಬಡಕಲ ಗಲ್ಲಿಯಲ್ಲಿರುವ ಡಾ: ಉಮೇಶ ಆಚಾರ್ಯ ಇವರ ಶಿವಶಕ್ತಿ ಕ್ಲಿನಿಕನಲ್ಲಿ ನಕಲಿ ಮಾತ್ರೆಗಳು, .ಮಾತ್ರೆಗಳು ಡೆ ಕ್ರೀಮ, ನೈಟ್ ಕ್ರಿಮ್, ಗುಲಕಂದ, ಬಲವರ್ಧನ,ಇನ್ನೂ ಅನೇಕ ನಕಲಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು, ಅದರ ಹಿನ್ನೆಲೆಯಲ್ಲಿ ಸಂಬಂದಪಟ್ಟ ಇಲಾಖೆಯವರು ದಾಳಿ ಮಾಡಿದ್ದರು,

ನಕಲಿ‌ ವಸ್ತುಗಳ ತಯಾರಿಕೆ ವಿಷಯವನ್ನು ಇಲಾಖೆಗೆ ಮತ್ತು ಇನ್ನೂಳಿದವರಿಗೆ ನೀನೆ ಹೇಳುತಿದ್ದಿಯಾ ಎಂದು ಡಾ: ಉಮೇಶ ಆಚಾರ್ಯ ಅವರ ಪತ್ನಿ ಮತ್ತು ಇನ್ನುಳಿದವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಪ್ರಕಾಶ ಮನವಾಡೆ ಗಂಭೀರ ಆರೋಪ ಮಾಡಿದ್ದಾರೆ,

ಅಷ್ಟೆ ಅಲ್ಲ ತಾವೆ ಬರೆದುಕೊಂಡು ಬಂದಂತಹ ಬಾಂಡ ಮೇಲೆ ಒದಲಿಕ್ಕೆ ಕೊಡದೆ ಹಲ್ಲೆ ಮಾಡಿ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡು ಮೊಬೈಲ ಕಸಿದುಕೊಂಡು ಬೆಳಗಾವಿಯಲ್ಲಿ ಕಾಣಿಸಿಕೊಂಡರೆ ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿದ್ದರೆ ಅದಕ್ಕೆ ಜೀವಕ್ಕೆ ಹೇದರಿ ಬಸ್ ಮೂಲಕ ನಾನು ಸ್ವಂತ ಊರಿಗೆ ಮರಳಿದ್ದೇನೆಂದು ಹೇಳಿದ್ದಾರೆ.

ಇನ್ನೂ ಹಲ್ಲೆಗೊಳಗಾದ ಪ್ರಕಾಶ ಮನವಾಡೆ ಇತ ಸದ್ಯ ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ,ಇನ್ನು ಈ ಘಟನೆ ಬೆಳಗಾವಿಯ ಮಾರ್ಕೇಟ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಅಲ್ಲಿನ ಪೋಲಿಸರು ಪ್ರಕರಣ ದಾಖಲಿಸಿಕೊಳ್ಳಲು ಬೆಳಗಾವಿಗೆ ಹೇಳುತ್ತಿರುವುದು ವಿಪರ್ಯಾಸವಾಗಿದೆ.

ಮನೋಹರ ಮೇಗೇರಿ,

WhatsApp Group Join Now
Telegram Group Join Now
Share This Article
error: Content is protected !!