Ad imageAd image

ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಪಂಜಿನ ಮೆರವಣಿಗೆ

Bharath Vaibhav
ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಪಂಜಿನ ಮೆರವಣಿಗೆ
WhatsApp Group Join Now
Telegram Group Join Now

ಕಲಘಟಗಿ:-ಕಾರ್ಗಿಲ್‌ನಲ್ಲಿ ಯುದ್ದಮಾಡಿ ಮಡಿದು ಗಾಯಗೊಂಡು ನಮ್ಮ ದೇಶದ ಕೀರ್ತಿ ಪಥಾಕೆಯನ್ನ ಎತ್ತಿ ಹಿಡಿಯುವಲ್ಲಿ ಸಾಕ್ಷಿಯಾದ ಭಾರತಾಂಬೆಯ ಹೆಮ್ಮೆಯ ಯೋಧರಿಗೆ ಗೌರವಪೂರ್ವಕ ನಮನಗಳನ್ನ ನಾವು ಸದಾ ಸಲ್ಲಿಸಬೇಕು ಎಂದು ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ ಹೇಳಿದರು.

ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಶುಕ್ರವಾರ ಕಲಘಟಗಿ ತಾಲೂಕಿನ ದೇವಿಕೋಪ ಗ್ರಾಮದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ಹಾಗೂ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜೀವದ ಹಂಗು ತೊರೆದು ದೇಶದ ಗಡಿಯಲ್ಲಿ ಮಳೆ ಚಳಿ ಎನ್ನದೆ ನಮ್ಮನ್ನ ಹಗಲಿರಳು ರಕ್ಷಿಸುವ ಕಾಯಕದಲ್ಲಿ ನೀರತರಾಗಿರುತ್ತಾರೆ. ಅವರ ರಕ್ಷಣೆಗಾಗಿ ಸದಾ ನಾವು ಸ್ಮರಣೆ ಮಾಡೋಣ ಎಂದರು.

ಈ ಸಂದರ್ಭಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ಬಸವರಾಜ ಶರೇವಾಡ್, ಐ.ಸಿಗೋಕುಲ್, ಸುರೇಶ ಶಿಲವಂತರ, ಶ್ರೀಧರ ದ್ಯಾವಪ್ಪನವರ, ಶ್ರೀಕಾಂತಗೌಡ ಪಾಟೀಲ, ವಿ.ಎಸ್ ನೂಲ್ವಿ, ಶಂಕ್ರಪ್ಪ ಕೆಲಗೇರಿ, ಬಸಪ್ಪ ತುಮರಿಕೊಪ್ಪ, ಮುತ್ತಪ್ಪ ಟೊಂಗಳೆ, ಮಹೇಶ ಕೆಲಗೇರಿ, ನಾರಾಯಣ ಸಂಗಮೇಶ್ವರ ಸೇರಿದಂತೆ ಗ್ರಾಮದ ಯುವಕರು ಹಿರಿಯರು ಹಾಗೂ ಮಾಜಿ ಸೈನಿಕರು ಇದ್ದರು.

ವರದಿ :-ಶಶಿಕುಮಾರ ಕಟ್ಟಿಮನಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!