ಸೇಡಂ: ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಕಲಬುರ್ಗಿಯಲ್ಲಿ ದಿನಾಂಕ ೧೯/೦೧/೨೦೨೫ ರಂದು ಸಮಾಜದ ಕುಲದೈವರಾದ ಶ್ರೀ ಶಿವಶರಣ ಮಾದಾರ ಚೆನ್ನಯ್ಯನವರ ಜಯಂತಿ ಹಮ್ಮಿಕೊಂಡಿದ್ದು. ಜಯಂತ್ಯೋತ್ಸವ ಕಾರ್ಯಾಧ್ಯಕ್ಷರಾಗಿ ಸೇಡಂ ತಾಲೂಕಿನ ಹಿರಿಯ ಮುಖಂಡರಾದ ಜಗನ್ನಾಥ್ ಚಿಂತಪಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಸರ್ಕ್ಯೂಟ್ ಹೌಸ್ ನಲ್ಲಿ ಸಭೆ ಹಮ್ಮಿಕೊಂಡಿದ್ದ ಅವರು ಸಮಾಜದ ಅಭಿವೃದ್ಧಿಗೆ ಮತ್ತು ಸೇಡಂ ಶಿವಶರಣ ಮಾದಾರ ಚೆನ್ನಯ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನ ಮಾಡಬೇಕಾಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಡಿಎಂಎಸ್ಎಸ್ ಮುಧೋಳ್ ವಲಯ ಅಧ್ಯಕ್ಷರಾದ ಭೀಮು ಮುಧೋಳ್ ಮಾತನಾಡಿ ನಮ್ಮಲ್ಲಿ ಎಷ್ಟೇ ಮನಸ್ಥಾಪಗಳಿದ್ದರೂ ಅವೆಲ್ಲವನ್ನೂ ಬಿಟ್ಟು ನಮ್ಮ ಪಟ್ಟಣದಲ್ಲಿರುವ ಶಿವಶರಣ ಮಾದಾರ ಚೆನ್ನಯ್ಯನವರ ಮೂರ್ತಿ ಉದ್ಘಾಟನೆಯನ್ನು ಮಾಡುವ ನಿರ್ಧಾರ ಮಾಡಬೇಕು.
ನಮ್ಮ ಸೇಡಂ ತಾಲೂಕಿಗೆ ವಿವಿಧ ಜಿಲ್ಲೆಗಳಿಂದ ಸಮಾಜದ ಮುಖಂಡರನ್ನು ತರಿಸಿ ಸಮಾಜದ ಏಳಿಗೆಗಾಗಿ ಶ್ರಮಿಸುವ ಪ್ರಯತ್ನ ನಾವೆಲ್ಲ ಮಾಡಬೇಕಾಗಿದೆ ಎಂದು ಮಾತನಾಡಿದರು.
ಕಲಬುರ್ಗಿಯಲ್ಲಿ ನಡೆಯಲಿರುವ ಶ್ರೀ ಶಿವಶರಣ ಮಾದಾರ ಚೆನ್ನಯ್ಯನನವರ ಜಯಂತ್ಯೋತ್ಸವಕ್ಕೆ ಸೇಡಂ ತಾಲೂಕಿನ ಮಾದಿಗ ಸಮಾಜದ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಗನ್ನಾಥ ಚಿಂತಪಲ್ಲಿಯವರು ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಸಮಸ್ತ ಯುವಕರು, ಹಿರಿಯರು ಪಾಲ್ಗೊಂಡಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್