Ad imageAd image

ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜವತಿಯಿಂದ ದಿ.ಭೀಮಣ್ಣ ಖಂಡ್ರೆಯವರಿಗೆ ಶ್ರದ್ಧಾಂಜಲಿ

Bharath Vaibhav
ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜವತಿಯಿಂದ ದಿ.ಭೀಮಣ್ಣ ಖಂಡ್ರೆಯವರಿಗೆ ಶ್ರದ್ಧಾಂಜಲಿ
WhatsApp Group Join Now
Telegram Group Join Now

ಗುರುಮಠಕಲ್ : ಪಟ್ಟಣದ ಬಸ್ಟ್ಯಾಂಡ್ ಸರ್ಕಲ್ ನಲ್ಲಿ ಶನಿವಾರ ಬೆಳಿಗ್ಗೆ ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು, ಸಂಘಟನೆ ಮತ್ತು ಸಮಗ್ರ ಬೆಳವಣಿಗೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಲೋಕನಾಯಕ ಶ್ರೀ ಭೀಮಣ್ಣ ಖಂಡ್ರೆ ಅವರಿಗೆ ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದಿವಂಗತ ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ತದನಂತರ ಮಾತನಾಡಿದ ಮಾಜಿ ಅಧ್ಯಕ್ಷರಾದ ಡಾ. ಭೀಮಶಂಕರ ಮುತ್ತಗಿ ಸಮಾಜದ ಒಳಹೊರಗಿನ ಭೇದಭಾವಗಳನ್ನು ತೊಡೆದುಹಾಕಿ, ವೀರಶೈವ ಲಿಂಗಾಯತ ಸಮುದಾಯವನ್ನು ಒಂದು ಸೂತ್ರಕ್ಕೆ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಸಮಾಜಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರ ಸಾಧನೆಗಳನ್ನು ಸ್ಮರಿಸಿ, ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವು ಬರಿಸುವ ಶಕ್ತಿ ನೀಡಲಿ ಎಂದು ಸಮಾಜದ ವತಿಯಿಂದ ಎರಡು ನಿಮಿಷ ಮೌನ ಆಚರಿಸಲಾಯಿತು.

ಅಧ್ಯಕ್ಷ ಶಿವಾನಂದ ಬೂದಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ವಸ್ತ್ರದ, ಮಾಜಿ ಅಧ್ಯಕ್ಷರಾದ ನಾಗಭೂಷಣ್ ಅವಂಟಿ, ಮಲ್ಲಿಕಾರ್ಜುನ ಹಿರೇಮಠ, ಸಮಾಜದ ಹಿರಿಯರಾದ ಚಂದ್ರಶೇಖರ ಮಂಚಾಲ, ನರಸರೆಡ್ಡಿ ಪೊಲೀಸ್ ಪಾಟೀಲ ಗಡ್ಡೆಸುಗೂರು, ಧರ್ಮವೀರ ವಾರದ, ಅಶೋಕ ಮುತ್ತಗಿ, ವಿಜಯರಾಜ್ ಶಾಸ್ತ್ರಿ, ನಾಗಣ್ಣ ಕಾಳಗಿ, ಶಂಕ್ರಯ್ಯ ಸ್ವಾಮಿ ಸಾಲಿಮಠ, ರವಿಕುಮಾರ್ ಕೋಟಕೊಂಡಿ,ಶಂಕ್ರಯ್ಯ ಸ್ವಾಮಿ ಪಸ್ಪುಲ್, ಶರಣಪ್ಪ ಪಸಾರ, ರವಿಶಂಕರ್ ಮುತ್ತಗಿ, ದಯಾನಂದ ಸಿದ್ಧರಾಮ ಸ್ವಾಮಿ, ವಿಜಯ ಹಾಜರಿದ್ದರು.

ವರದಿ : ರವಿ ಬುರನೋಳ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!