ಸಿಂಧನೂರು : ಭಾರತೀಯ ಜನತಾ ಪಾರ್ಟಿ ಸಿಂಧನೂರು ವಿಧಾನ ಸಭಾ ಕ್ಷೇತ್ರದ ನಗರ ಮಂಡಲ ಎಸ್.ಸಿ ಮೋರ್ಚಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಸೇನಪ್ಪ ಹೆಚ್.ಸೂಲಂಗಿ ರವರಿಗೆ ಸನ್ಮಾನಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಹಸೇನಪ್ಪ ಹೆಚ್. ಸೋಲಂಗಿ ರವರ ಸ್ನೇಹಿತರ ಬಳಗದಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನವನ್ನು ಸ್ವೀಕರಿಸಿ ಬಿ ಜೆ ಪಿ,ಪಕ್ಷವು ನನ್ನ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಒಂದು ಸ್ಥಾನವನ್ನು ಕೊಟ್ಟಿದ್ದು ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು ಇನ್ನು ಸನ್ಮಾನಿಸಿದ ಸ್ನೇಹಿತರು ಮಾತನಾಡಿ ಹಸೇನಪ್ಪ ಹೆಚ್, ಸೂಲಂಗಿ ಯವರು ಇನ್ನೂ ಉತ್ತುಂಗಕ್ಕೆ ಬೆಳೆಯಲಿ ಎಂದು ಆಶಿಸಿದರು, ಈ ವೇಳೆ ಮರಿಯಪ್ಪ ಬಿಎಸ್ಪಿ, ದುರುಗೇಶ್. ಅಶೋಕ್ ಮೇಗಳಮನಿ, ಜಮದಗ್ನಿ ಕಾರಟಗಿ, ದುರುಗಪ್ಪ ಹೆಡಿಗಿಬಾಳ, ನಾಗರಾಜ ಹೆಡಿಗಿಬಾಳ, ಹುಸೇನಪ್ಪ ವಿರುಪಾಪರ.ಸುರೇಶ್ ಎಲೆಕೂಡ್ಲಿಗಿ,ಆಲಂಬಷ ಬೂದಿಹಾಳ ಹುಲುಗೇಶ್ ಕೆಂಗೇರಿ ಹುಲುಗೇಶ್ ತೀಡಿಗೊಳ.ಸಿದ್ದಪ್ಪ ಕೊಳಬಾಳ.ಜಂಬಣ್ಣ ಉಪ್ಪಲದೊಡ್ಡಿ ಸೇರಿದಂತೆ ಅನೇಕರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.




