ಚಿಟಗುಪ್ಪ :ವಿದ್ಯಾರ್ಥಿಗಳು ಗುರಿ ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಂದ್ರಕಾಂತ ಶಾಬಾದಕರ್ ತಿಳಿಸಿದರು.
ಚಿಟಗುಪ್ಪ ತಾಲ್ಲೂಕಿನ ತಾಳಮಡುಗಿ ಗ್ರಾಮದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆಡಂಬರದ ಜೀವನವನ್ನು ತ್ಯಾಗಮಾಡಿ ತಮ್ಮ ಸ್ಪಷ್ಟ ಗುರಿಯೆಡೆಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗ ಸ್ಥಾನಕ್ಕೆ ಏರಬಹುದು.ಅಲ್ಲದೆ ಸತತ ಪ್ರಯತ್ನ,ಸಮಯ ಪಾಲನೆ ಪ್ರಾಮಾಣಿಕತೆ ರೂಢಿಸಿಕೊಂಡರೆ ಯಶಸ್ಸು ಒಲಿದು ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲರಾದ ಹಣಮಂತ ಗೌಡಗಾಂವಕರ ಮಾತನಾಡಿ,ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.ಮೌಲ್ಯಗಳಿಂದ ಜೀವನದಲ್ಲಿ ನೆಮ್ಮದಿ ಪಡೆಯಲು ಸಾಧ್ಯವಿದೆ.ಪರೀಕ್ಷೆ ಎಂಬ ಭಯಬೇಡ ಅದೊಂದು ಹಬ್ಬವೆಂದು ತಿಳಿದು ಮುನ್ನುಗಬೇಕು ಎಂದು ಹೇಳಿದರು.
ಕಾಲೇಜು ಕಮಿಟಿ ಉಪಾಧ್ಯಕ್ಷ ಈಶ್ವರ ನೇಳಗಿ ಮಾತನಾಡಿ,ಕಂಠ ಪಾಠ ಮಾಡದೆ ಅದನ್ನು ಅನುಭವದ ರೀತಿಯಲ್ಲಿ ಅರಿತುಕೊಂಡು ಓದಿದರೆ ಪರೀಕ್ಷೆಯಲ್ಲಿ ಎಲ್ಲವೂ ಜ್ಞಾಪಕಕ್ಕೆ ಬರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಪ್ರಿನ್ಸಿಪಾಲ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಮನಮಥ ಡೊಳೆ,ಉಪನ್ಯಾಸಕರಾದ ಸುನಿಲಕುಮಾರ,ರವೀಂದ್ರ ರೆಡ್ಡಿ,ಪ್ರೀತಿ, ಸಂಗೀತ,ನಿವೃತ್ತ ಉಪನ್ಯಾಸಕ ಮಾಣಿಕರಾವ ಗೊರಟೆ ಸೇರಿ ವಿದ್ಯಾರ್ಥಿಗಳು ಇದ್ದರು.ಕಾರ್ಯಕ್ರಮವನ್ನು ಉಪನ್ಯಾಸಕ ಸಂಜುಕುಮಾರ ಜುಮ್ಮಾ ನಿರೂಪಿಸಿ ವಂದಿಸಿದರು.
ವರದಿ:ಸಜೀಶ ಲಂಬುನೋರ




