ಬೆಂಗಳೂರು: ಪ್ರತಿಯೋಬ್ಬರು ಮಾನಸಿಕ ಹಾಗೂ ದೈಹಿಕ ಉತ್ತಮ ಆರೋಗ್ಯವಂತನಾಗಿ ಇರಬೇಕಾದರೆ ಪ್ರತಿ ಒಬ್ಬ ಮನುಷ್ಯನಿಗೆ ಅಗತ್ಯವಿದೆ ದೇಹ ಮನಸ್ಸಿನ ಸದೃಢತೆ ಹಾಗೂ ಸುಸ್ಥಿತಿ ಮತ್ತು ಮನೋಲ್ಲಾಸಕ್ಕೆ ಯೋಗ ಸಹಾಯವಾಗುತ್ತಿದೆ ಎಂದು ಮಹೇಶ್ ಮೆರಿಟೋರಿಯ ಕೇಂದ್ರೀಯ ವಿದ್ಯಾಲಯ ಶಾಲೆಯ ಅಧ್ಯಕ್ಷ ಪ್ರೊ.ಎಸ್.ಜಿ ಮನೂರ್ ಹೇಳಿದರು. ಅವರು ವಿದ್ಯಾರಣ್ಯಪುರ ಮಹೇಶ್ ಮೆರಿಟೋರಿಯ ಕೇಂದ್ರೀಯ ವಿದ್ಯಾಲಯ ಶಾಲೆ ಮತ್ತು ಪ್ರಜಾಪಿತ ಬ್ರಹ್ಮಕುಮಾರಿಸ್ ಸಂಸ್ಥೆ ಸಂಯೋಗದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಯೋಗಕ್ಕೆ ಚಾಲನೆ ನೀಡಿದರು ಮಾತನಾಡಿದರು.

ಪತಂಜಲಿ ಯೋಗ ಕೇಂದ್ರದ ಸಂಸ್ಥಾಪಕ ಹಾಗೂ ಸ್ನೇಹ ಸಂಗಮ ಯೋಗ ಬಳಗದ ಅಧ್ಯಕ್ಷ ಡಾ. ಜಗದೀಶ್ ಎಂ ಎಸ್ ಅವರು ಯೋಗ ಶಿಬಿರದ ಮಹತ್ವ ಮತ್ತು ಪರಿಹಾರದ ಬಗ್ಗೆ ಯೋಗ ಪ್ರದರ್ಶನ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯೋಗದ ಪ್ರಯೋಜನೆ ತಿಳಿಸಿಕೊಟ್ಟರು.
ವಿದ್ಯಾರಣ್ಯಪುರ ಪ್ರಜಾಪಿತ ಬ್ರಹ್ಮಕುಮಾರಿಸ್ ಸಂಸ್ಥೆಯ ಮುಖ್ಯಸ್ಥೆ ಯೋಗಿನಿ ರೂಪಾ ಧ್ಯಾನ, ಶ್ರದ್ದೆ ಬಗ್ಗೆ ಮಾರ್ಗದರ್ಶನ ನೀಡಿದರು. ಶಾಲೆಯ ಶಿಕ್ಷಕ ಹನುಮಂತ ಅವರು ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಲತಾ, ಉಮಾ, ಪರಿಮಳ,ಶಾಲೆಯ ಪ್ರಾಂಶುಪಾಲ ಗುರು ಪ್ರಸಾದ್, ಶಾಲಾ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಪೋಷಕರು ಮತ್ತು ವಿವಿಧ ಸಂಸ್ಥೆಗಳ ಪ್ರಮುಖರು ಸಾರ್ವಜನಿಕರು ಯೋಗದಲ್ಲಿ ಭಾಗವಹಿಸಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




