ಟರ್ಕಿ: ಭಾರತೀಯರ ಅಸಮಾಧಾನ ಹಾಗೂ ಆಕ್ರೋಶಗಳ ಹೊರತಾಗಿಯೂ ನಾವು ಮುಸ್ಲಿಂ ಸಹೋದರ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ನಮ್ಮ ಬೆಂಬಲವನ್ನು ಮುಂದುವರಿಸಲಿದ್ದೇವೆ ಎಂದು ಟರ್ಕಿ ಹೇಳಿದ. ಟರ್ಕಿ ಅಧ್ಯಕ್ಷ ರೆಸೆಪ್ ತಯಿಪ್ ಎರ್ಡೊಗನ್ ಅವರು ಒಳ್ಳೆಯ ಹಾಗೂ ಕೆಟ್ಟ ಎರಡೂ ಟೈಮ್‌ನಲ್ಲೂ ನಾವು
ಪಾಕಿಸ್ತಾನದೊಂದಿಗೆ ನಿಲ್ಲಲಿದ್ದೇವೆ ಅಂತ ಹೇಳಿದ್ದಾರೆ.
ಈ ಮೂಲಕ ಭಾರತದಿಂದ ಟರ್ಕಿ ದೇಶವು ಇನ್ನಷ್ಟು ದೂರ ಸರಿದಂತೆ ಆಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಎದುರಾಗಿದ್ದ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಮೂಲಕ ಟರ್ಕಿ
ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಇದೀಗ ಯಾವುದೇಬಾಯ್ಕಟ್ (ಬಹಿಷ್ಕಾರಗಳಿಗೆ) ನಾವು ತಲೆಕೆಸಿಕೊಳ್ಳುವುದಿಲ್ಲ ಎಂದು ಹೇಳಿದೆ.
ಭಾರತದಲ್ಲಿ ಟರ್ಕಿ ಹಾಗೂ ಅಜರ್‌ಬೈಜಾನ್ ವಿರುದ್ಧ ಆಕ್ರೋಶ ಹೆಚ್ಚಳವಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಈಚೆಗೆ ನಡೆದ ಭಾರೀ ಸಂಘರ್ಷದಲ್ಲಿ ಟರ್ಕಿ ದೇಶವು ಪಾಕಿಸ್ತಾನದ ಬೆಂಬಲಕ್ಕೆ
ಬಂದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಭಾರತದಾದ್ಯಂತ ಟರ್ಕಿ ಮತ್ತು ಅಜರ್‌ಬೈಜಾನ್ ಬಾಯ್ಕಟ್ ಜೋರಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಟರ್ಕಿಗೆ ಇದರಿಂದ ಭಾರೀ
ಸಂಕಷ್ಟ ಎದುರಾಗಿದೆ. ಆದರೆ, ಇದರ ನಡುವೆಯೂ ಟರ್ಕಿ ನಾವು ಯಾವುದೇ ನಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.




