Ad imageAd image

ತುರ್ವಿಹಾಳ ಪ ಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ. ಕಾಂಗ್ರೆಸ್ ಕೈಗೆ ! ಅವಿರೋಧ ಆಯ್ಕೆ !

Bharath Vaibhav
ತುರ್ವಿಹಾಳ ಪ ಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ. ಕಾಂಗ್ರೆಸ್ ಕೈಗೆ ! ಅವಿರೋಧ ಆಯ್ಕೆ !
WhatsApp Group Join Now
Telegram Group Join Now

ಸಿಂಧನೂರು : – ತುರುವಿಹಾಳ ಪಟ್ಟಣ ಪಂಚಾಯಿತಿ ಕರ್ನಾಟಕ ರಾಜ್ಯದ ಸಿಂಧನೂರು ತಾಲೂಕಿನಿಂದ 17 ಕಿ.ಮೀ ದೂರದಲ್ಲಿದೆ ರಾಯಚೂರು ಜಿಲ್ಲೆಗೆ 107 ಕಿಲೋಮೀಟರ್ ದೂರವಿದೆ ಭಾರತದ ಬತ್ತದ ಕಣಜವೆಂದು ಸಿಂಧನೂರು ತಾಲೂಕು ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದೆ.

ತುರುವಿಹಾಳ ಪಟ್ಟಣದಲ್ಲಿ 2011ರ ಪ್ರಕಾರ 13034 ಜನಸಂಖ್ಯೆ ಹೊಂದಿದ್ದು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಮೀಸಲಾತಿ ಘೋಷಣೆಯಾಗಿತ್ತು ಚಟುವಟಿಕೆಗಳು ಚುರುಕು ಗೊಂಡಿತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಪುರುಷಗೇ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.

ಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು ರಾಜಕೀಯ ನಾಯಕರ ಮನವೊಲಿಸಲು ಕಸರತ್ತು ನಡೆದಿತ್ತು ಈ ಪಟ್ಟಣ ಪಂಚಾಯಿತಿಗೆ ಬರುವ ಹಳ್ಳಿಗಳು ಶ್ರೀನಿವಾಸ್ ಕ್ಯಾಂಪ್- ಗುಂಜಳ್ಳಿ- ರಾಘವೇಂದ್ರ ಕ್ಯಾಂಪ್- ಬಸಣ್ಣ ಕ್ಯಾಂಪ್ ಗಳನ್ನು ಒಳಗೊಂಡಿದ್ದು ಒಟ್ಟು 14 ವಾರ್ಡುಗಳನ್ನು ಹೊಂದಿದೆ ಕಾಂಗ್ರೆಸ್ಸಿಗೆ 9- ಬಿಜೆಪಿಗೆ -2 ಹಾಗೆ ಪಕ್ಷೇತರರು -3 ಗೆದ್ದಿದ್ದರು ಮೂರು ಪಕ್ಷೇತರ ಸದಸ್ಯರು ಒಂದು ಬಿಜೆಪಿ ಸದಸ್ಯ ಕಾಂಗ್ರೆಸಿಗೆ ಸೇರ್ಪಡೆಯಾಗಿದ್ದಾರೆ.

ಆದ್ದರಿಂದ ಕಾಂಗ್ರೆಸ್ ಸದಸ್ಯರ ಸಂಖ್ಯೆ 13ಕ್ಕೆ ಏರಿಕೆಯಾಗಿತ್ತು ಮಸ್ಕಿ ಶಾಸಕರಾದ ಆರ್. ಬಸನಗೌಡ ತುರುವಿಹಾಳ ಅವರ ಸ್ವ ಗ್ರಾಮದ ಪಟ್ಟಣ ಪಂಚಾಯತಿ ಇದಾಗಿದೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಮೂವರ ಹೆಸರು ಮುಂಚೂಣಿಯಲ್ಲಿತ್ತು ಶಾಸಕರ ಗೆಲುವಿನಲ್ಲಿ ಪ್ರಮುಖ ಪಾತ್ರವಿಸಿದ ಪ್ರಭಾವಿ ಕಾಂಗ್ರೆಸ್ ಮುಖಂಡ ಮಲ್ಲನಗೌಡ ದೇವರ ಮನಿ ಅವರ ಮಗ 14ನೇ ವಾರ್ಡಿನ ಸದಸ್ಯ ಬಾಪುಗೌಡ ದೇವರಮನಿ ಅವರು ಅಧ್ಯಕ್ಷೀಯ ಪ್ರಬಲ ಆಕಾಂಕ್ಷಿಯಾಗಿದ್ದರು .

ಬಿಜೆಪಿಯಿಂದ ಗೆದ್ದು ನಂತರ ಕಾಂಗ್ರೆಸ್ಗೇ ಸೇರಿರುವ 7ನೇ ವಾರ್ಡಿನ ಸದಸ್ಯ ಶರಣಪ್ಪ ಹೊಸ ಗೌಡ್ರು ಅವರು ಕೂಡ ಅಧ್ಯಕ್ಷರಾಗುವ ಹಂಬಲ ವ್ಯಕ್ತಪಡಿಸಿದ್ದರು ತುರ್ವಿಹಾಳ ಪಟ್ಟಣದ ಕಾಂಗ್ರೆಸ್ ಮುಖಂಡ – ಕೆ. ಶ್ಯಾಮಿದ್ ಸಾಬ್ ಚೌದ್ರಿ ಅವರು 3ನೇ ವಾರ್ಡಿ ನಿಂದ ಗೆಲುವು ಸಾಧಿಸುವ ಮೂಲಕ ಹಿರಿಯ ಸದಸ್ಯರಾಗಿ ಅಲ್ಪಸಂಖ್ಯಾತ ಸಮುದಾಯದ ಕೋಟದಲ್ಲಿ ಅವಕಾಶ ಪಡೆಯಲು ಹಿರಿಯರ ಅನುಗ್ರಹಕ್ಕಾಗಿ ಪ್ರಯತ್ನಿಸುತಿದ್ದರು.

ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು ಗಂಗಮ್ಮ ಗಂಡ ಯಲ್ಲಪ್ಪ ಬೋವಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಮಹಿಳೆ ಸದಸ್ಯರಾಗಿದ್ದಳು ಹೀಗಿರುವಾಗ ಮೀಸಲಾತಿ ಪ್ರಕಾರ ಶಾಸಕ ಆರ್. ಬಸನಗೌಡ ತುರುವಿಹಾಳ ರವರು ಕಾಂಗ್ರೆಸಿನ ಹಿರಿಯ ಮುಖಂಡರಾದ ಮಲ್ಲನಗೌಡ ದೇವರಮನಿ ಇನ್ನಿತರು ಕಾಂಗ್ರೆಸ್ ಮುಖಂಡರು ಸೇರಿ ಹಿರಿಯ ಮುಖಂಡರ ಜೊತೆ, ಉತ್ತಮ ಬಾಂಧವ ಹೊಂದಿದ್ದ ಶ್ರೀ ಕೆ. ಶ್ಯಾಮಿದ್ ಸಾಬ್ ಚೌದ್ರಿ ಅವರನ್ನು ಅಲ್ಪಸಂಖ್ಯಾತ ಸಮುದಾಯದ ಕೋಟದಲ್ಲಿ “ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಗೊಂಡರು ಹಾಗೂ ಎಸ್ಸಿ. ಮಹಿಳೆ ಮೀಸಲಾತಿ ಕೋಟದಡಿಯಲ್ಲಿ ಉಪಾಧ್ಯಕ್ಷರಾಗಿ ಗಂಗಮ್ಮ ಗಂಡ ಯಲ್ಲಪ್ಪ ಬೋವಿ ಅವಿರೋಧವಾಗಿ ಆಯ್ಕೆಗೊಂಡರು. ನಂತರ ಇಬ್ಬರು ಮಾತನಾಡಿ ಶಾಸಕರಿಗೂ ಮತ್ತು ಹಿರಿಯ ಮುಖಂಡರಿಗೂ ಧನ್ಯವಾದಗಳು ಹೇಳಿ ಪಟ್ಟಣದ ಅಭಿವೃದ್ಧಿ ಸ್ಥಳೀಯರ ಕೊಂದು ಕೊರತೆಗಳನ್ನು ಹಾಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರುಗಳ ಸಹಕಾರ ಪರಸ್ಪರೊಂದಿಗೆ ಪಕ್ಷಾತೀತವಾಗಿ ಜನಪರ ಸೇವೆ ಮಾಡುತ್ತಿವೆ ಎಂದು ಹೇಳಿದರು.

ವರದಿ -ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!