Ad imageAd image

ಟಿವಿಕೆ ಮುಖ್ಯಸ್ಥ ನಟ ವಿಜಯ್‌ ನಾಮಪತ್ರ ಸಲ್ಲಿಕೆ : 619 ಕೋಟಿ ರೂ. ಆಸ್ತಿ ಒಡೆಯ 

Bharath Vaibhav
ಟಿವಿಕೆ ಮುಖ್ಯಸ್ಥ ನಟ ವಿಜಯ್‌ ನಾಮಪತ್ರ ಸಲ್ಲಿಕೆ : 619 ಕೋಟಿ ರೂ. ಆಸ್ತಿ ಒಡೆಯ 
WhatsApp Group Join Now
Telegram Group Join Now

ಚೆನ್ನೈ: ಮುಂದಿನ ತಿಂಗಳು ಚುನಾವಣೆಗೆ ಸಜ್ಜಾಗಿರುವ ತಮಿಳುನಾಡಿನಲ್ಲಿ ಸಿಎಂ ಸ್ಟಾಲಿನ್, ಟಿವಿಕೆ ಮುಖ್ಯಸ್ಥ ನಟ ವಿಜಯ್‌ ಸೇರಿದಂತೆ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚೊಚ್ಚಲ ಚುನಾವಣೆ ಸ್ಪರ್ಧಿಸುತ್ತಿರುವ ವಿಜಯ್‌ 619 ಕೋಟಿ ಸಂಪತ್ತಿನ ಒಡೆಯನಾಗಿದ್ದಾರೆ.

ಶಿಳ್ಳೆ ಚಿಹ್ನೆಯಡಿ ಮೊದಲ ಅದೃಷ್ಟ ಪರೀಕ್ಷೆಗಿಳಿದಿರುವ ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಸೋಮವಾರ ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ವಿಜಯ್‌ ಒಟ್ಟು 618.76 ಕೋಟಿ ರು. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ತಮ್ಮ ಆಸ್ತಿ 603 ಕೋಟಿ ರು. ಪತ್ನಿ ಸಂಗೀತಾ ಹೆಸರಲ್ಲಿ 15.76 ಕೋಟಿ ರು. ಇದೇ ಎಂದು ಉಲ್ಲೇಖಿಸಿದ್ದಾರೆ.

ವಿಜಯ್‌ 404.58 ಕೋಟಿ ರು. ಚರಾಸ್ತಿ, 198.62 ಕೋಟಿ ರು. ಸ್ಥಿರಾಸ್ತಿ

ಇದರಲ್ಲಿ ವಿಜಯ್‌ 404.58 ಕೋಟಿ ರು. ಚರಾಸ್ತಿ, 198.62 ಕೋಟಿ ರು. ಸ್ಥಿರಾಸ್ತಿ ಇದೆ. ಇದರಲ್ಲಿ ವಿವಿಧ ಬ್ಯಾಂಕುಗಳಲ್ಲಿರುವ 213 ಕೋಟಿ ರು. ಠೇವಣಿ ಹಣವೂ ಸೇರಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ವಿಜಯ್‌ ಯಾವುದೇ ಸಾಲವನ್ನು ಹೊಂದಿಲ್ಲ. ಕಳೆದ ವಿತ್ತೀಯ ವರ್ಷದಲ್ಲಿ ಅವರು 184.53 ಕೋಟಿ ರು. ಆದಾಯ ತೆರಿಗೆ ಪಾವತಿಸಿದ್ದಾರೆ.

ಪತ್ನಿ ಸಂಗೀತಾ ಅವರಿಗೆ 12.60 ಕೋಟಿ ರೂ., ಮಗ ಜೇಸನ್ ಸಂಜಯ್ ಅವರಿಗೆ 8.78 ಲಕ್ಷ ರೂ. ಮತ್ತು ಮಗಳು ದಿವ್ಯಾ ಸಶಾ ಅವರಿಗೆ 4.60 ಲಕ್ಷ ರೂ. ಸಾಲ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ.

ಸ್ಟಾಲಿನ್‌ ನಾಮಪತ್ರ:

ಸತತ ಮೂರು ಬಾರಿ ಕೊಳತ್ತೂರು ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸ್ಟಾಲಿನ್‌ ನಾಲ್ಕನೇ ಸಲ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ರೋಡ್‌ಶೋ ನಡೆಸಿ, ಮತಯಾಚಿಸಿದರು. 2011,2016, 2021ರಲ್ಲಿ ಸ್ಟಾಲಿನ್‌ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!