ಚಿಕ್ಕೋಡಿ : ರಂಗ ಪಂಚಮಿ ಹಿನ್ನಲೆಯಲ್ಲಿ ಬಣ್ಣದಾಟವಾಡಿ ಬಾವಿಗೆ ಸ್ನಾನಕ್ಕೆ ಹೋಗಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾದ ಘಟನೆ ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ವೇದಾಂತ ಹಿರೇಕೋಡಿ (11), ಮನೋಜ ಕಲ್ಯಾಣಿ (09) ಸಾವನ್ನಪ್ಪಿರುವ ದುರ್ದೈವಿಗಳು.ಬುಧವಾರ ಪಟ್ಟಣದಲ್ಲಿ ರಂಗ ಪಂಚಮಿ ನಿಮಿತ್ತ ಬಣ್ಣ ಆಡಿದ್ದ ಮಕ್ಕಳು ಬಾವಿ ನೀರಿನಲ್ಲಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ..
ಬಾಲಕರು ಎಷ್ಟೊತ್ತಾದರೂ ಬಾವಿಯಿಂದ ಬಾರದ ಕಾರಣ ಪೋಷಕರು ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಘಟನಾ ಸ್ಥಳಕ್ಕೆ ಸದಲಗಾ ಠಾಣೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.