Ad imageAd image

ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ಬಾಲಕರು ಸಾವ

Bharath Vaibhav
ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ಬಾಲಕರು ಸಾವ
WhatsApp Group Join Now
Telegram Group Join Now

ವಿಜಯಪುರ: ಜಿಲ್ಲೆಯಲ್ಲಿ ಇಂದು ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದಂತ ಇಬ್ಬರು ಬಾಲಕರು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ.

ವಿಜಯಪುರ ತಾಲೂಕಿನ ದ್ಯಾಬೇರಿಯಲ್ಲಿ ಕೆರೆಯೊಂದಕ್ಕೆ ಮೀನು ಹಿಡಿಯೋದಕ್ಕೆ ಇಬ್ಬರು ಬಾಲಕರು ತೆರಳಿದ್ದರು. ಈ ವೇಳೆ ವಿದ್ಯುತ್ ವೈಯರ್ ಕೆರೆಗೆ ತುಂಡಾಗಿ ಬಿದ್ದಿತ್ತು.

ಇದನ್ನು ಕಾಣದಂತ ಬಾಲಕರು ಕೆರೆಯಲ್ಲಿ ಮೀನು ಹಿಡಿಯೋದಕ್ಕೆ ಇಳಿದಂತ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ರೋಹಿತ್ ಅನಿಲ್ ಚೌವಾಹ್ (8) ಹಾಗೂ ವಿಜಯ್ ಪಿಂಟು ಚೌವಾಹ್(16) ಎಂಬುವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಬಾಲಕರ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಕೆರೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಂತ ಇಬ್ಬರು ಬಾಲಕರ ಶವವನ್ನು ಹೊರ ತೆಗೆದಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!