ಬೆಳಗಾವಿ : ಇಬ್ಬರು ಖದೀಮರು ಹಾಡು ಹಗಲೆ ಮನೆಯಲ್ಲಿದ್ದ ಮಕ್ಕಳನ್ನ ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು ಮಕ್ಕಳ ಕಳ್ಳತನ ಮಕ್ಕಳ ಕಿಡ್ನಾಪ್ ಮಾಡಿದ ಘಟನೆ ಜಿಲ್ಲೆಯ ಅಥಣಿ ಪಟ್ಟಣದ ಹುಲಗಬಾಳಿ ರಸ್ತೆಯ ಸ್ವಾಮಿ ಕಾಲೋನಿಯಲ್ಲಿ ನಡೆದಿದೆ.
ಹಾಡು ಹಗಲೆ ಮಕ್ಕಳ ಕಳ್ಳತನ ಮನೆಯಲ್ಲಿದ್ದ ಇಬ್ಬರೂ ಮಕ್ಕಳನ್ನ ಇಂದು ಮಧ್ಯಾಹ್ನ 2 ಗಂಟೆಗೆ ಇಬ್ಬರು ಖದೀಮರು ಅಪಹರಿಸಿದ್ದಾರೆ.
ಮಕ್ಕಳನ್ನ ಕದ್ದು ಓಡುತ್ತಿದ್ದ ವಿಡಿಯೋ ಮನೆಯ ಸಿಸಿ ಕ್ಯಾಮೆರದಲ್ಲಿ ದೃಶ್ಯ ಸೆರೆಯಾಗಿದೆ. ಸ್ವಾಮಿ ಪ್ಲಾಟನಲ್ಲಿರುದ ವಿಜಯ ದೇಸಾಯಿ ಮನೆಗೆ ನುಗ್ಗಿ ಮಕ್ಕಳ ಅಪಹರಣ ಮಾಡಿದ್ದಾರೆ
ವಿಜಯ ದೇಸಾಯಿ ಹಲವಾರು ಜನರ ಜೊತೆ ದುಡ್ಡಿನ ವ್ಯವಹಾರ ಹಿನ್ನಲೆ ವಿಜಯ ದೇಸಾಯಿ ಮಕ್ಕಳ ಕಳ್ಳತನ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಸ್ವಾಸ್ಥಿ ವಿಜಯ ದೇಸಾಯಿ (4) ಹಾಗೂ ಒಯಂ ವಿಜಯ ದೇಸಾಯಿ (3) ಅಪಹರಣವಾದ ಮಕ್ಕಳು ಸದ್ಯ ಅಥಣಿ ಪೋಲಿಸರು 3 ತಂಡ ರಚಿಸಿ ಮಕ್ಕಳ ಕಳ್ಳರ ಹುಡಕಾಟ ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.