ಹುಕ್ಕೇರಿ :-ಇದೇ ವಿಷಯ ಕುರಿತು ಹೆಬ್ಬಾಳದ ಬಸಯ್ಯ ಮಠಪತಿ ಹಾಗೂ ಸುವರ್ಣ ಬಸಯ್ಯ ಮಠಪತಿ ಎಂಬ ದಂಪತಿಗಳು ನಮ್ಮ ವಾಹಿನಿಗೆ ಕರೆ ನೀಡಿ ಮಾಹಿತಿ ನೀಡಿದ್ದಾರೆ.
ನಮ್ಮ ತಂದೆಯವರ ಆಸ್ತಿ ಮೂರ್ ಎಕರೆ ನಾಲ್ಕು ಗುಂಟೆ ಅ, 212 ಇದ್ದುದ್ದನ್ನು ತೆಗೆದು 24 ಮಾಡಿಕೊಂಡು ಜಮೀನವನ್ನು ಪಿಪಿ ಚೇರ್ಮನ್ ಅನ್ನುವ ಹೆಸರಿನ ಗ್ರಾಮದ ವ್ಯಕ್ತಿ ಒಬ್ಬರು ತನ್ನ ಹೆಸರಿನ ಮೇಲೆ ಟ್ರಾನ್ಸ್ಫರ್ ಮಾಡಿಕೊಂಡು ಉತಾರದಲ್ಲಿ ಪಡಾ ಜಮೀನ್ ಎಂದು ಉಲ್ಲೇಖ ವಿದ್ದರೂ ಅಲ್ಲಿ ಮನೆಗಳು ನಿರ್ಮಾಣ ಮಾಡಿ ಕಬಳಿಕೆ ಮಾಡಿ ಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಇವೆಲ್ಲ ದಾಖಲೆಗಳನ್ನು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ತೋರಿಸಿದರು ನ್ಯಾಯಕ್ಕಾಗಿ ಪ್ರದಾಡಿದರು ಯಾವುದು ಪ್ರಯೋಜನವಾಗುತ್ತಿಲ್ಲ.
ನಮಗೆ ವಯಸ್ಸಾಗಿದೆ ನಾವು ಎರಡೇ ಜನ ದುಡಿಯಲು ಆಗುವುದಿಲ್ಲ ನಮ್ಮ ತಂದೆಯವರು ಸ್ವತಂತ್ರ ಹೋರಾಟಗಾರರು ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ ಯಾವುದು ಪೆನ್ಸಿನ್ ಹಣದ ಸಹಾಯಧನವಿಲ್ಲ ನಾವು ಈಗ ಬಾಡಿಗೆ ಮನೆಯಲ್ಲಿ ಇದ್ದೇವೆ ಗಂಡು ಮಕ್ಕಳಿಲ್ಲ ಇದ್ದ ಎರಡು ಹೆಣ್ಣು ಮಕ್ಕಳನ್ನು ನಾವು ಮದುವೆ ಮಾಡಿ ಕೊಟ್ಟಿದ್ದೇವೆ ಇಂಥ ಪರಿಸ್ಥಿತಿಯಲ್ಲಿಯು ಯಾರು ಸಹಾಯಕ್ಕೆ ಬರುವುದಿಲ್ಲ ಇದು ಜೀವನದಲ್ಲಿ ತಾಳಲಾರದ ಸಂಕಷ್ಟ ತಂದಿದೆ ಅದಕ್ಕಾಗಿ ನಾಮಗೆ ನ್ಯಾಯ ಸಿಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದರು.
ಇದಕ್ಕೆ ಸಂಬಂಧಪಟ್ಟ ದಂಪತಿಗಳು ನಮ್ಮ ವಾಹಿನಿ ಯೊಂದಿಗೆ ಮಾತನಾಡಿದ್ದಾರೆ ಬನ್ನಿ ಕೇಳೋಣ.ಇನ್ನಾದರೂ ಎಚ್ಚೆತ್ತುಕೊಂಡು ಸಂಬಂಧ ಪಟ್ಟ ಇಲಾಖೆಯವರು ದಾಖಲೆಗಳನ್ನು ಪರಿಗಣಿಸಿ ಈ ದಂಪತಿಗಳಿಗೆ ನ್ಯಾಯ ಕೊಡಬೇಕಾಗಿದೆ.
ವರದಿ:- ರಾಜು ಮುಂಡೆ