ಕಲಬುರಗಿ : ಭೀಮಾ ನದಿಯಲ್ಲಿ ಮುಳುಗಿ ಇಬ್ಬರು ಭಕ್ತರು ಸಾವನ್ನಪ್ಪಿದ ಘಟನೆ ಗಾಣಗಾಪುರ ಬಳಿ ನಡೆದಿದೆ.ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಭೀಮಾ ನದಿಯಲ್ಲಿ ಘಟನೆ ನಡೆದಿದೆ.
ಮೃತರನ್ನು ಬಾಲಾಜಿ (47) ಮಹೇಶ್ ಡೋಯಿಯೋಜೆ (49) ಎಂದು ಗುರುತಿಸಲಾಗಿದೆ. ದತ್ತಾತ್ರೇಯನ ದರ್ಶನಕ್ಕೆ ಬಂದಿದ್ದ ಭಕ್ತರು ಭೀಮಾ ನದಿಯ ನೀರಿನ ಆಳ ತಿಳಿಯದೇ ಪವಿತ್ರ ಸ್ನಾನ ಮಾಡಲು ಇಳಿದಿದ್ದಾರೆ.
ಈ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಮಹಾರಾಷ್ಟ್ರ ಮೂಲದವರು ಎಂದು ಹೇಳಲಾಗಿದೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.