ಸಿಂಧನೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದ ಬೆನ್ನಲ್ಲೇ ಗುರುವಾರದಂದು ಹಾಡುಹಗಲೇ ಸಿನಿಮಾದ ರೀತಿಯಲ್ಲಿ ಬಿದಿರಿನ ಕಟ್ಟಿಗೆ, ಕಬ್ಬಿಣದ ರಾಡು, ಹಿಡಿದು ಹೊಡೆದಾಟವಾಗಿದ್ದು, ಎಪಿಎಂಸಿಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಟ್ಟಿಗೆ ಹಿಡಿದುಕೊಂಡು ಹಲ್ಲೆ ನಡೆಸಿದ ಘಟನೆ ಅ.23 ರ ಗುರುವಾರ ಬೆಳಗ್ಗೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ. ಗಲಾಟೆ ಯಾವ ಕಾರಣಕ್ಕೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಎರಡು ಗುಂಪಿನ ಮಧ್ಯೆ ಸಿನಿಮೀಯಾ ಶೈಲಿಯಲ್ಲಿ ಹೊಡೆದಾಟವಾಗಿದ್ದು, ಕೆಲವರನ್ನು ನೆಲಕ್ಕೆ ಹಾಕಿ ಕಟ್ಟಿಗೆಯಿಂದ ಹೊಡೆಯಲಾಗಿದೆ. ದೀಪಾವಳಿ ಆಚರಣೆ ಬೆನ್ನಲ್ಲೇ ನಡೆದ ಈ ಗುಂಪು ಘರ್ಷಣೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬಿಗಿ ಬಂದೋಬಸ್ತ್ ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ವರದಿ: ಗಾರಲದಿನ್ನಿ ವೀರನ ಗೌಡ




