ಶಿವಮೊಗ್ಗ : ಅನ್ನಭಾಗ್ಯದ ಅಕ್ಕಿ ವಿತರಣೆಗೆ ಸರ್ಕಾರ ಸಕಲ ಕ್ರಮಕೈಗೊಂಡಿದ್ದು, ಫೆಬ್ರವರಿ ತಿಂಗಳ ಅಕ್ಕಿ ಜತೆ ಮಾರ್ಚ್ ತಿಂಗಳ ಅಕ್ಕಿ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು , ಹಣದ ಬದಲಾಗಿ ಅಕ್ಕಿಯನ್ನು ವಿತರಿಸಲಾಗುವುದು.ಈಗಾಗಲೇ ಅದಕ್ಕೆ ಬೇಕಾದ ಅಕ್ಕಿ ಖರೀದಿಸಿದ್ದು, ನಾವು ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು.
ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತೆ. ಈಗಾಗಲೇ ವಿತರಣೆಗೆ ಕ್ರಮ ಜರುಗಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಅಕ್ಕಿ ತಲುಪಿಸಲು ಕ್ರಮ ಕೈಗೊಂಡಿರೋದಾಗಿ ಹೇಳಿದರು.
ಅನ್ನಭಾಗ್ಯ ಕರ್ನಾಟಕದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದ್ದು, ಅಕ್ಕಿ ಕೊರತೆ ಹಿನ್ನೆಲೆ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿತ್ತು.




