Ad imageAd image

ಹಿಡಕಲ್ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ದುರಂತ ಸಾವು 

Bharath Vaibhav
ಹಿಡಕಲ್ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ದುರಂತ ಸಾವು 
WhatsApp Group Join Now
Telegram Group Join Now

ಬೆಳಗಾವಿ : ಬೇಸಿಗೆಯ ರಜೆಯ ಮೋಜಿನಲ್ಲಿದ್ದ ಹುಡುಗರ (Boys) ಪಾಲಿಗೆ ಹಿಡಕಲ್ ಜಲಾಶಯ ಮೃತ್ಯುಕೂಪವಾಗಿ ಪರಿಣಮಿಸಿದೆ.

ಹುಕ್ಕೇರಿ ತಾಲೂಕಿನ ಹಳೆಗುಡನಟ್ಟಿ ಸಮೀಪವಿರುವ ಹಿಡಕಲ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ದುರಂತವಾಗಿ ಮೃತಪಟ್ಟಿದ್ದಾರೆ.

ಈ ದುರಂತದಲ್ಲಿ ಮೃತಪಟ್ಟವರನ್ನು ದಾದಾಬಾನಟ್ಟಿಯ ಆರ್.ಸಿ ಸೆಂಟರ್ ನಿವಾಸಿಗಳಾದ ಕೃಷ್ಣಾ ವಿಠಲ ಖಾನಾಪೂರೆ (14) ಮತ್ತು ಪ್ರಜ್ವಲ ಗೋಕಾರ (14) ಎಂದು ಗುರುತಿಸಲಾಗಿದೆ.

ಶಾಲೆಗಳಿಗೆ ರಜೆ ಘೋಷಣೆಯಾದ ಕಾರಣ ಗೆಳೆಯರೊಂದಿಗೆ ದೇವಸ್ಥಾನದ ಬಳಿಯ ನದಿಗೆ ಇಳಿದಿದ್ದ ಈ ಬಾಲಕರು, ನೀರಿನ ಆಳ ತಿಳಿಯದೇ ಅಪಾಯಕ್ಕೆ ಸಿಲುಕಿದ್ದಾರೆ.

ಈ ವೇಳೆ ಜೊತೆಯಲ್ಲಿದ್ದ ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಹರೆಯದ ಮಕ್ಕಳನ್ನು ಅಕಾಲಿಕವಾಗಿ ಕಳೆದುಕೊಂಡ ಪೋಷಕರ ರೋದನ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುವಂತಿತ್ತು. ಸದ್ಯ ಈ ಘಟನೆಯು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.

ಈ ದುರಂತದಲ್ಲಿ ಮೃತಪಟ್ಟವರನ್ನು ದಾದಾಬಾನಟ್ಟಿಯ ಆರ್.ಸಿ ಸೆಂಟರ್ ನಿವಾಸಿಗಳಾದ ಕೃಷ್ಣಾ ವಿಠಲ ಖಾನಾಪೂರೆ (14) ಮತ್ತು ಪ್ರಜ್ವಲ ಗೋಕಾರ (14) ಎಂದು ಗುರುತಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!