Ad imageAd image

ಮಲಿಕವಾಡ ಡಂಪರ ಮತ್ತು ಬಸ ನಡುವೆ ಭಾರಿ ಡಿಕ್ಕಿ, ಮಹಿಳೆ ಸೇರಿದಂತೆ ಇಬ್ಬರಿಗೆ ಅಲ್ಪ ಸ್ವಲ್ಪ ಗಾಯ

Bharath Vaibhav
ಮಲಿಕವಾಡ ಡಂಪರ ಮತ್ತು ಬಸ ನಡುವೆ ಭಾರಿ ಡಿಕ್ಕಿ, ಮಹಿಳೆ ಸೇರಿದಂತೆ ಇಬ್ಬರಿಗೆ ಅಲ್ಪ ಸ್ವಲ್ಪ ಗಾಯ
WhatsApp Group Join Now
Telegram Group Join Now

ಚಿಕ್ಕೋಡಿ :-  ಮಲಿಕವಾಡದ ಸದಲಗಾ ಎಕ್ಸಂಬಾ ಮುಖ್ಯರಸ್ತೆಯ ಮಲಿಕವಾಡ ಬಸ ನಿಲ್ದಾಣದ ಮುಂಭಾಗದಲ್ಲಿ ಡಂಪರ ಮತ್ತು ಬಸ್ ಡಿಕ್ಕಿ ಹೊಡೆದ ಕಾರಣ ಬಸ್ಸಿನಲ್ಲಿದ್ದ ಮಹಿಳೆ ಲಾಲೂಬಾಯಿ ರಸೂಲ್ ನದಾಫ್ (ವಯಸ್ಸು 60, ಕಲ್ಲೋಳ ನಿವಾಸಿ) ಗಾಯಗೊಂಡಿದ್ದಾರೆ.

ಡಂಪರ ಚಾಲಕ ವಿಕ್ರಂ ಕಾಂಬಳೆ ವಯಸ್ಸು 35, ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ನಿವಾಸಿ ಗಾಯಗೊಂಡಿದ್ದಾರೆ. ಮಂಗಳವಾರ ತಡವಾಗಿ ಈ ಅಪಘಾತ ನಡೆದಿದೆ.

ಕಲ್ಬುರ್ಗಿ-ಇಚಲಕರಂಜಿ (ಬಸ್ ಸಂಖ್ಯೆ ಕೆಎ-23 ಎಫ್ 1037) ಎಕ್ಸ್‌ಪ್ರೆಸ್ ಬಸ್ ಎಕ್ಸಂಬಾ ಮಾರ್ಗವಾಗಿ ಬರುತ್ತಿತ್ತು ಎಂದು ಸ್ಥಳದಲ್ಲಿ ಮಾಹಿತಿ ಲಭಿಸಿದೆ. ಮಲಿಕವಾಡ ಬಸ್ಟಾಂಡ್ ಸರ್ಕಲ್ಗೆ ಬರುವಾಗ ಗ್ರಾಮದಿಂದ ಬಂದ ಡಂಪರ (ನಂ. ಕೆಎ 28 ಬಿ 3067) ಬಸ ನಿಲ್ದಾಣದಿಂದ ಮುರುಮ ಖಾಲಿ ಮಾಡಿಕೊಂಡು ನಡುವಿನ ಮಾರ್ಗವಾಗಿ ಚಿಕ್ಕೋಡಿಗೆ ಹೋಗುತ್ತಿದ್ದಾಗ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ.

ಡಿಕ್ಕಿ ಹೊಡೆದ ಎರಡೂ ವಾಹನಗಳ ಮುಂಭಾಗ ನಜ್ಗುಜ್ಜಾಗಿದೆ ಬಸ್ಸಿನಲ್ಲಿ ಇದ್ದ ಲಾಲಬಾಯಿ ಅವರ ಕಿವಿಗೆ ಪೆಟ್ಟು ಬಿದ್ದಿದ್ದು, ಆಕೆಯನ್ನು ಚಿಕ್ಕೋಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಟಿಪ್ಪರ ಚಾಲಕನಾದ ವಿಕ್ರಮನ ತಲೆಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಎಕ್ಸಂಬಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಎರಡು ವಾಹನಗಳ ಅಪಘಾತ ಸಂಭವಿಸಿದ ತಕ್ಷಣ ಸದಲಗಾ ಪೊಲೀಸ್ ಠಾಣೆಯಲ್ಲಿ ಅಕ್ಕ ಈ ಪ್ರಕರಣವನ್ನು ದಾಖಲೆ ಮುಂದಿನ ತನಿಖೆ ಮಾಡಲಾಗುತ್ತಿದೆ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!