Ad imageAd image

ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಇಬ್ಬರು ಸಾವು, ಇಬ್ಬರು ಗಂಭೀರ 

Bharath Vaibhav
ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಇಬ್ಬರು ಸಾವು, ಇಬ್ಬರು ಗಂಭೀರ 
ACCIDENT
WhatsApp Group Join Now
Telegram Group Join Now

ವಿಜಯಪುರ : ವಿಜಯಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು ಮತ್ತಿಬ್ಬರಿಗೆ ಗಂಭೀರವಾದ ಗಾಯಗಳ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವನಹಟ್ಟಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.ಬೆಳಗಾವಿ ಜಿಲ್ಲೆಯ ಕಾಗವಾಡದಿಂದ ನಾಲ್ವರು ಶ್ರೀಶೈಲಕ್ಕೆ ತೆರಳುತ್ತಿದ್ದರು.

ಈ ವೇಳೆ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಚಂದ್ರವ್ವ ಟಕ್ಕಣ್ಣನವರ (70) ಕಾಮಪ್ಪ ಅವರಾದಿ (65) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಗಾಯಗೊಂಡ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನೀಡಲಾಗುತ್ತಿದೆ. ಅಪಘಾತದ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!