ರಾಯಚೂರು: ಎರಡು ಪ್ರತ್ಯೇಕ ಘಟನೆಯಲ್ಲಿ ಹೋಳಿ ಹಬ್ಬದ ಬಳಿಕ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ.
ಬಣ್ಣದೋಕುಳಿ ಬಳಿಕ ಯರಗೇರಾ ಗ್ರಾಮದ ಕಿರಾಣಿ ಅಂಗಡಿ ವ್ಯಾಪಾರಸ್ಥ ಮಹಾದೇವ್(30) ಎಂಬುವರು ಆರ್‌ಡಿಎಸ್ ಕಾಲುವೆಯಲ್ಲಿ ಕಾಣೆಯಾದರೆ, ಮತ್ತೊಂದೆಡೆ ಸುಲ್ತಾನಪುರ ಗ್ರಾಮದ ಬಳಿ ಇರುವ ಹೊಂಡದಲ್ಲಿ ಜಾಗೀರವೆಂಕಟಾಪುರ ಗ್ರಾಮದ ಸೋಮನಗೌಡ(45) ಎಂಬುವರು ಕಾಣೆಯಾಗಿದ್ದಾರೆ.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬಣ್ಣದೋಕುಳಿ ಆಡಿದ ಬಳಿಕ ಸ್ನಾನ ಮಾಡಲೆಂದು ಮಹಾದೇವನು ತನ್ನ ಇಬ್ಬರು ಸ್ನೇಹಿತರೊಂದಿಗೆ ಆರ್‌ಡಿಎಸ್ ಕಾಲುವೆ ತೆರಳಿದ್ದರು. ಈ ವೇಳೆ ಇಬ್ಬರು ಪ್ರಾಣಾಪಾಯದಿಂದ ಪಾರಾದರೆ, ಮಹಾದೇವ್ ನಾಪತ್ತೆಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.