Ad imageAd image

ಉದ್ಯೋಗ ಆಮಿಷವೊಡ್ಡಿ ಯುವತಿಯರಿಗೆ ಸೆಕ್ಸ್, ಮತಾಂತರ, ಇಬ್ಬರು ಸಹೋದರಿಯರು ಅರೆಸ್ಟ್ 

Bharath Vaibhav
ಉದ್ಯೋಗ ಆಮಿಷವೊಡ್ಡಿ ಯುವತಿಯರಿಗೆ ಸೆಕ್ಸ್, ಮತಾಂತರ, ಇಬ್ಬರು ಸಹೋದರಿಯರು ಅರೆಸ್ಟ್ 
WhatsApp Group Join Now
Telegram Group Join Now

ಭೋಪಾಲ್: ಉದ್ಯೋಗ ನೀಡುವ ಆಮಿಷವೊಡ್ಡಿ ಯುವತಿಯರನ್ನು ಸೆಕ್ಸ್ ರಾಕೆಟ್‌ಗೆ ತಳ್ಳುವುದು ಮತ್ತು ಬಲವಂತದ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಭೋಪಾಲ್‌ನಲ್ಲಿ ಇಬ್ಬರು ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಅಮ್ರೀನ್ ಮತ್ತು ಆಫ್ರೀನ್ ಎಂಬ ಸಹೋದರಿಯರು ಹಾಗೂ ಅವರ ಸಹಚರ ಚಂದನ್ ಯಾದವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಲಾಲ್, ಚಾನು ಮತ್ತು ಯಾಸಿರ್ ಎಂಬ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.21 ಮತ್ತು 32 ವರ್ಷದ ಇಬ್ಬರು ಮಹಿಳೆಯರು ಬಾಗ್ ಸೇವಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಜಾಲ ಬಯಲಿಗೆ ಬಂದಿದೆ.

ಆರ್ಥಿಕವಾಗಿ ಹಿಂದುಳಿದ ಯುವತಿಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈ ಸಹೋದರಿಯರು, ಮನೆ ಕೆಲಸಕ್ಕೆ 10,000 ರೂ. ಸಂಬಳ, ಉಚಿತ ವಸತಿ ಮತ್ತು ಐಷಾರಾಮಿ ಜೀವನದ ಆಮಿಷವೊಡ್ಡಿ ಕರೆತರುತ್ತಿದ್ದರು.

ಲೈಂಗಿಕ ದೌರ್ಜನ್ಯ: ಕೆಲಸಕ್ಕೆ ಸೇರಿದ ಯುವತಿಯರನ್ನು ಪಬ್ ಮತ್ತು ಪಾರ್ಟಿಗಳಿಗೆ ಕರೆದೊಯ್ದು, ಬಲವಂತವಾಗಿ ಮದ್ಯ ಮತ್ತು ಎಂಡಿ (MD) ಡ್ರಗ್ಸ್ ನೀಡಿ ಶ್ರೀಮಂತ ವ್ಯಕ್ತಿಗಳಿಂದ ಅತ್ಯಾಚಾರ ಮಾಡಿಸಲಾಗುತ್ತಿತ್ತು ಎಂದು ಸಂತ್ರಸ್ತೆಯರು ಆರೋಪಿಸಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!