ಹುಬ್ಬಳ್ಳಿ: ಕಾಲೇಜು ಕಟ್ಟಡದಿಂದ ಬಿದ್ದು ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದಾರೆ. ಕಟ್ಟಡ ನಿರ್ಮಾಣ ಕೆಲಸದ ವೇಳೆಯಲ್ಲಿ ದುರಂತ ನಡೆದಿದೆ.
ಹುಬ್ಬಳ್ಳಿಯ ಕೆಎಲ್‌ಇ ಮೆಡಿಕಲ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಕುಂದಗೋಳ ತಾಲೂಕಿನ ಹೊತ್ತಿಗೇರಿ ಮಲ್ಲೇಶ್(45), ಅಣ್ಣಿಗೇರಿ ನಿವಾಸಿ ವರ್ಷ ಅಕ್ಬರ ಸಂಗಟಿ(36) ಮೃತಪಟ್ಟವರು ಎಂದು ಹೇಳಲಾಗಿದೆ.
ಕೆಲಸ ಮಾಡುವಾಗ ಕಟ್ಟಡದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ




