ಬೆಳಗಾವಿ : ಮರಳು ಸಾಗಿಸುತ್ತಿದ್ದ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಆಗಸಗ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕರನ್ನು ಯೋಗೇಶ್ ನಾವಿ, ನಿತೀಶ್ ತರಳೆ ಎಂದು ಗುರುತಿಸಲಾಗಿದೆ.ಬೆಳಗಾವಿಯಲ್ಲಿನ ಅಗಸಗ ಗ್ರಾಮದ ಬಳಿ ಬೈಕ್ ನಲ್ಲಿ ಯೋಗೀಶ್ ಹಾಗೂ ನಿತೇಶ್ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಏಕಾಏಕಿ ಬೈಕ್ ಗೆ ಗುದ್ದಿ ಮುಂದೆ ಸಾಗಿದೆ.
ಟಿಪ್ಪರ್ ಗುದ್ದಿದ ರಭಸಕ್ಕೆ ಯುವಕರು ಬೈಕ್ ನಿಂದ ಹಾರಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್ ನೇರವಾಗಿ ಯುವಕರ ಮೇಲೆ ಹರಿದಿದೆ. ಪರಿಣಾಮ ಯೋಗೀಶ್ ಹಾಗೂ ನಿತೇಶ್ ಅವರ ದೇಹ ಛಿದ್ರ ಛಿದ್ರವಾಗಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.