Ad imageAd image

ಡಾ: ಬಿ,ಆರ್,ಅಂಬೇಡ್ಜರ ಹೋರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ

Bharath Vaibhav
ಡಾ: ಬಿ,ಆರ್,ಅಂಬೇಡ್ಜರ ಹೋರಾಟದಿಂದ ಇವತ್ತು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ: ಸುಧಾ ಪೂಜೇರಿ
WhatsApp Group Join Now
Telegram Group Join Now

ಗೋಕಾಕ : ಯಾವುದೇ ಸಮಾಜದಲ್ಲಿ ಒಂದಿಬ್ಬರ ಮನಸ್ಥಿತಿ ಬದಲಾದರೆ ಇಡೀ ಸಮಾಜ ಬದಲಾವಣೆಯನ್ನು ಹೊಂದಲು ಸಾಧ್ಯವಿಲ್ಲ, ಇಡೀ ಸಮುದಾಯವೇ ಬದಲಾವಣೆಯತ್ತಾ ಹೆಜ್ಜೆ ಹಾಕಿದರೆ ಸರ್ವರ ಏಳಿಗೆ ಖಂಡಿತ ಸಾಧ್ಯ ಎಂದು ಆಚಾರ್ಯ ಶ್ರೀ ಶಾಂತಿಸಾಗರ ಶಿಕ್ಷಣ ಸಂಸ್ಥೆ ಕೊಣ್ಣೂರ ಮುಖ್ಯೋಪಾದ್ಯಾಯಿನಿ ಕು.ಸುಧಾ ಪೂಜೇರಿ ನುಡಿದರು.
ಅವರು ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ: ಬಿ,ಆರ್,ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಇವತ್ತು ಡಾ: ಬಿ,ಆರ್, ಅಂಬೇಡ್ಕರ ಹೊರಾಟದಿಂದ ಮಹಿಳೆಯರಿಗೆ ಹಕ್ಕು ನೀಡಿದ್ದರಿಂದ ಇವತ್ತು ಅವರು ಪ್ರತಿ ಕ್ಷೇತ್ರದಲ್ಲಿಯೂ ಪ್ರತಿನಿದಿಸುತ್ತಿದ್ದಾರೆ.ನಮ್ಮ ಇಂದಿನ ದಿನ ನಿತ್ಯದ ಜೀವನ ನಮ್ಮ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಅಂದು ಅಂಬೇಡ್ಕರ್ ಸಮಸ್ಯೆಯ ಭಾಗವಾಗಿ, ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದರಿಂದಾಗಿ ಸಮಾಜದಲ್ಲಿನ ಶೋಷಿತರ ಭವಣೆಯನ್ನು ಅರಿಯಲು ಸಾಧ್ಯವಾಯಿತು. ಅಂತಹ ಶೋಷಿತರಿಗೆ ಸಮಾಜದಲ್ಲಿ ಗೌರಯುತವಾಗಿ ಬದುಕುವ ಪರಿಸ್ಥಿತಿಯನ್ನು ತರಲು ಪ್ರೇರೆಪಿಸಿತು.

ಅಧ್ಯಕ್ಷತೆ ಬಾಷಣ ಮಾಡಿದ ಜಿನ್ನಪ್ಪ ಚೌಗಲಾ ಇವರು ಅಸ್ಪ್ರಶ್ಯತೆಯ ಭಾವನೆ ಮೊದಲು ನಮ್ಮ ಮನಸ್ಸಿನಿಂದ ತೊಲಗಬೇಕು.ಇಂದು ನಮ್ಮ ಮತಿಯ ಹಿಂದೆ ಒಂದೊಂದು ಮತದ ಪ್ರಭಾವ ದಟ್ಟವಾಗಿ ಬೀರಿ, ಎಲ್ಲವನ್ನು ಹಾಗೂ ಎಲ್ಲರನ್ನು ಸಂಶಯದಿಂದ ದೃಷ್ಟಿಯಿಂದ ನೋಡುವ ಪರಿಸ್ಥಿತಿಗೆ ಬಂದಿದ್ದೆವೆ.
ಆ ಹಿನ್ನಲೆಯಲ್ಲಿ ಅಂಬೇಡ್ಕರವರ ಚಿಂತನೆ ಸದಾ ನಮಗೆಲ್ಲರಿಗೂ ಉತ್ತಮ ಮಾರ್ಗದರ್ಶಿ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಭಾರತಿ ಅಂಬೀಗೇರ, ಸಾವಿತ್ರಿ ಉಗರಖೋಡ, ರೇಖಾ ಪೂಜೇರಿ, ಲಕ್ಷ್ಮೀ ನಡುವಿನಮನಿ,ಚಂದ್ರವ್ವಾ ಸುಖುಂಡೆ, ಸುಮನ ಕುಂದರಗಿ, ಮಹೇಶ್ವರಿ ಸಿದ್ದನ್ನವರ, ಗೀತಾ ಹಲಗಿ , ಶಾಸ್ವತ ಪಾಸಲಕರ ,ಸುನಿತಾ ಹುಲಕುಂದ ಸೇರಿದಂತೆ ಪ್ರೇಮಾ ಗಾಡಿವಡ್ಡರ,ಉಪಸ್ಥಿತರಿದ್ದು ಭಾರತಿ ಮಸೂತಿ,ಕಾರ್ಯಕ್ರಮವನ್ನು ನಿರ್ವಹಿಸಿದರು.

WhatsApp Group Join Now
Telegram Group Join Now
Share This Article
error: Content is protected !!