ನಿಪ್ಪಾಣಿ: 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೇಡಕಿಹಾಳದ ಬೀ.ಎಸ್ ಸಂಯುಕ್ತ ಶಾಲೆಯ 159 ವಿದ್ಯಾರ್ಥಿಗಳ ಪೈಕಿ 95 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 59.74%ರಷ್ಟು ಫಲಿತಾಂಶ ಪಡೆದುಕೊಂಡಿದೆ.
625ಕ್ಕೆ 615 ಅಂಕ ಪಡೆದು ಸಾಕ್ಷಿ ಪಾಟೀಲ ಶಾಲೆಗೆ ಪ್ರಥಮ ಸ್ಥಾನ,610 ಅಂಕ ಪಡೆದ ಕುಮಾರಿ ಋತುಜಾ ನಿಪ್ಪಾಣಿ ದ್ವಿತೀಯ ಸ್ಥಾನ ಹಾಗೂ 608 ಅಂಕ ಪಡೆದ ಕುಮಾರಿ ಪ್ರೇರಣಾ ಅರಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಶಾಲೆಯ ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆ ಬರೆದು 95 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಬಿ.ಎಸ್ ಸಂಯುಕ್ತ ಪ್ರೌಢ ಶಾಲೆಗೆ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಹಾಗೂ ಉನ್ನತ ದರ್ಜೆ ಯಲ್ಲಿ ತೇರ್ಗಡೆ ಹೊಂದಿದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಪಾಲಕರು ಸಿಬ್ಬಂದಿ ಗ್ರಾಮದ ಗುರಿ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.
ಮಹಾವೀರ ಚಿಂಚಣೆ




