ತಿಪಟೂರು: ತರಳಬಾಳು ಜಗದ್ಗುರು ಬೃಹನ್ಮಠ ಹಾಲ್ಕುರಿಕೆಯಲ್ಲಿ ಏಪ್ರಿಲ್ 30 ರಂದು ಸಂಜೆ 5.30 ಕ್ಕೆ, ತರಳಬಾಳು ಇಂಟರ್ನ್ಯಾಷನಲ್ ಶಾಲೆಯ ಆವರಣದಲ್ಲಿ ಉಪವಿಭಾಗ ಮಟ್ಟದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಲಾಗುವುದು ಎಂದು ಸಾಧು ವೀರಶೈವ ಸಮಾಜದ ಅಧ್ಯಕ್ಷ ಪಟ್ರೆಹಳ್ಳಿ ನಂಜುಂಡಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಆದೇಶದ ಮೇರೆಗೆ, ಧಾರ್ಮಿಕ ನಾಡು ಹಾಲ್ಕುರಿಕೆಯಲ್ಲಿ ಏಪ್ರಿಲ್ 30 ರಂದು ಬಸವನ ಜಯಂತಿ ಆಚರಿಸುತಿದ್ದೇವೆ, ತರಳಬಾಳು ಶ್ರೀಗಳು, ಗುರುಪರದೇಶಿಕೇಂದ್ರ ಸ್ವಾಮಿಜಿಗಳು, ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್, ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಚಿಕ್ಕನಾಯಕನಹಳ್ಳಿ,ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕಿನ ಸಾಧು ವೀರಶೈವ ಸಮಾಜದ ಸುಮಾರು 5 ರಿಂದ 6 ಸಾವಿರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ದಾಸೋಹ ವ್ಯವಸ್ಥೆ ಏರ್ಪಾಡು ಮಾಡಲಾಗುವುದು. ವೇದಿಕೆ ಕಾರ್ಯಕ್ರಮವನ್ನು ವೀಕ್ಷಿಸಲು 3000 ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ತರಳಬಾಳು ಶ್ರೀಗಳ ಅಮೃತಸ್ಥದಿಂದ ” ಅಣ್ಣ ಬಸವಣ್ಣ ” ಪುಸ್ತಕ ಬಿಡುಗಡೆ ಮಾಡಲಾಗುವುದು. ಬಸವೇಶ್ವರರ ಭಾವಚಿತ್ರ ಉತ್ಸವ ನಡೆಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಸಾಧು ವೀರಶೈವ ಸಮಾಜದ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ