ನಿತ್ಯ ನಾವು ಎಷ್ಟು ನೀರು ಕುಡಿಯಬೇಕು? ಯಾವ ಸಮಯದಲ್ಲಿ ನೀರು ಕುಡಿಯಬೇಕು ಎಂಬ ಸಂದೇಹಗಳು ಉದ್ಭವಿಸುತ್ತವೆ. ದೇಹವು ನಿರ್ಜಲೀಕರಣಗೊಂಡಾಗ ಮೆದುಳು ಯಾವ ಸಂಕೇತಗಳನ್ನು ಕಳುಹಿಸುತ್ತದೆ? ಅವುಗಳನ್ನು ಗುರುತಿಸುವುದು ಹೇಗೆ? ಜೊತೆಗೆ ನಿತ್ಯ ದೇಹಕ್ಕೆ ಎಷ್ಟು ನೀರು ಬೇಕಾಗುತ್ತದೆ ಎಂಬುದನ್ನು ತಿಳಿಯೋಣ. ನಾವು ಆಹಾರವಿಲ್ಲದೇ ಕೆಲವು ದಿನ ಬದುಕಬಹುದು, ಆದರೆ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ದೇಹವು ಸರಾಗವಾಗಿ ಕಾರ್ಯನಿರ್ವಹಿಸಲು ನೀರು ಅವಶ್ಯವಾಗಿದೆ. ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬುದನ್ನು ಈಗ ಒಂದೊಂದಾಗಿ ತಿಳಿದುಕೊಳ್ಳೋಣ.
ಹಸಿವಾದಾಗ ನೀರು ಕುಡಿಯುವುದು: ಹಸಿವಾದಾಗ ನೀರು ಕುಡಿಯಬೇಕಾಗುತ್ತದೆ. ಮತ್ತೆ ಬಾಯಾರಿದಾಗಲೂ ಕೂಡ ನೀರು ಕುಡಿಯಬೇಕಾಗುತ್ತದೆ. ಅನೇಕ ಜನರು ಇದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. ಇದಕ್ಕೆ ಕಾರಣವೆಂದರೆ ಮೆದುಳು ಬಾಯಾರಿಕೆ ಮತ್ತು ಹಸಿವು ಎರಡನ್ನೂ ಒಂದೇ ರೀತಿಯಲ್ಲಿ ಗುರುತಿಸುತ್ತದೆ. ಹಾಗಾಗಿ ಹಸಿವಾದರೂ ಹಾಗೂ ಬಾಯಾರಿಕೆಯಾದಾಗ ನೀರು ಸೇವಿಸಬೇಕಾಗುತ್ತದೆ. ದಿನಕ್ಕೆ 2ರಿಂದ 3 ಲೀಟರ್ ನೀರು ಕುಡಿಯುವುದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಬೆಳಗ್ಗೆ ಎಚ್ಚರವಾದ ನಂತರ: ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ವರದಿ ಪ್ರಕಾರ, ಬೆಳಗ್ಗೆ ಎದ್ದ ನಂತರ ಬಾಯಿ ಮುಕ್ಕಳಿಸಿ ಒಂದು ಲೋಟ ನೀರು ಕುಡಿಯುವುದು ಒಳ್ಳೆಯದು ಎಂದು ತಿಳಿಸುತ್ತದೆ. ರಾತ್ರಿಯಿಡೀ ಖಾಲಿಯಾಗಿದ್ದ ದೇಹಕ್ಕೆ ಒಂದು ಗ್ಲಾಸ್ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಚೈತನ್ಯ ಲಭಿಸುತ್ತದೆ. ದೇಹವು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯಲು ಸಾಧ್ಯವಾಗುತ್ತದೆ.




